ತುಂಗಾ ನದಿಯಲ್ಲಿ ಬೆಂಗಳೂರಿನ ಇಬ್ಬರು ಯುವಕರು ನಾಪತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 SEPTEMBER 2023

THIRTHAHALLI : ತುಂಗಾ ನದಿಯಲ್ಲಿ (Tunga River) ಈಜಲು ನೀರಿಗೆ ಇಳಿದಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಯುವರಿಗಾಗಿ (Youths) ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಭೀಮನಕಟ್ಟೆ ಸಮೀಪದ ತುಂಗಾ ನದಿಯಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರಿನ ಮಾಗಡಿಯ (Magadi) ಗೌತಮ್ (28) ಹಾಗೂ ಸುಜಯ (26) ಕಣ್ಮರೆಯಾದವರು. ಇವರ ಜೊತೆ ಇದ್ದ ಇನ್ನೊಬ್ಬ ಸ್ನೇಹಿತ ಗಿರೀಶ್‌ಗೆ ಈಜು ಬಾರದ ಕಾರಣ ನೀರಿಗೆ ಇಳಿದಿರಲಿಲ್ಲ. ಕಮ್ಮರಡಿಯಲ್ಲಿರುವ ಸ್ನೇಹಿತನ ಮನೆಗೆ ಮೂವರೂ ಭೇಟಿ ನೀಡಿದ್ದ ಸಂದರ್ಭ ನದಿಗೆ ತೆರಳಿದ್ದರು. ಯುವಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಭತ್ತ, ಹೆಚ್ಚು ನೀರು ಬೇಡುವ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment