ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಅಕ್ಟೋಬರ್ 2020
ದಸರಾ ಹಬ್ಬದ ಹಿನ್ನೆಲೆ ಶಿವಮೊಗ್ಗದ ಸಕ್ರೆಬೈಲು ಆನೆಗಳನ್ನು ಗಜಪೂಜೆಗೆ ಆಹ್ವಾನಿಸಲಾಗಿದೆ. ಮೂರು ಆನೆಗಳು ಗಜಪೂಜೆಯಲ್ಲಿ ಭಾಗವಹಿಸಲಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗಕ್ಕೆ ಬರುತ್ತವೆ ಮೂರು ಆನೆಗಳು
ಮೆರವಣಿಗೆ ಇಲ್ಲ, ಜಂಬೂ ಸವಾರಿಯು ಇಲ್ಲ. ಆದರೂ ದಸರಾ ಗಜಪೂಜೆಗೆ ಆನೆಗಳನ್ನು ಕರೆಯಿಸಲಾಗುತ್ತಿದೆ. ಅಕ್ಟೋಬರ್ 24ರ ಸಂಜೆ ಮೂರು ಆನೆಗಳು ಶಿವಮೊಗ್ಗಕ್ಕೆ ಬರಲಿವೆ. ಕೋಟೆ ರಸ್ತೆಯಲ್ಲಿರುವ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ವ್ಯವಸ್ಥೆ ಮಾಡಾಗಿದೆ ಎಂದು ಮೇಯರ್ ಸುವರ್ಣಾ ಶಂಕರ್ ಅವರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ಸಕ್ರೆಬೈಲಿಗೆ ಪಾಲಿಕೆ ತಂಡ
ಆನೆಗಳನ್ನು ಆಹ್ವಾನಿಸುವ ಸಲುವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್ ನೇತೃತ್ವದ ತಂಡ ಇವತ್ತು ಸಕ್ರೆಬೈಲು ಆನೆ ಬಿಡಾರಕ್ಕೆ ತೆರಳಿ, ಆನೆಗಳಿಗೆ ಪೂಜೆ ಸಲ್ಲಿಸಿದರು.
ಪಾಲಿಕೆ ಸದಸ್ಯರಾದ ಪ್ರಭಾಕರ್, ವಿಶ್ವನಾಥ್, ವಿಶ್ವಾಸ್, ಜ್ಞಾನೇಶ್ವರ್, ಶಿವಕುಮಾರ್, ಮಂಜುನಾಥ್, ರಾಹುಲ್, ರಾಜು, ಮಂಜುಳಾ ಶಿವಣ್ಣ, ಅನಿತಾ ರವಿಶಂಕರ್, ಅಧಿಕಾರಿಗಳಾದ ಪ್ರಮೋದ್, ಡಾ.ವಿನಯ್, ಅಕ್ಷತಾ, ಅನುಪಮಾ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]