ಕಾಂಗ್ರೆಸ್‌ನದ್ದು ‘3-C ಸರ್ಕಾರ’, ಮಿನಿಸ್ಟರ್‌ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

ಶಿವಮೊಗ್ಗ: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ಖಂಡಿಸಿ, ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆಗೆ (Resignation) ಆಗ್ರಹಿಸಿ ಬಿಜೆಪಿ ನಗರ ಘಟಕದ ವತಿಯಿಂದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್‌ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನದ್ದು ಮೂರು ಸಿ ಸರ್ಕಾರʼ

BJP-Holds-protest-against-Excise-minister-in-Shimoga.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯದ ಕಾಂಗ್ರೆಸ್‌ ಸರ್ಕಾರವು ಮೂರು ಸಿ ಸರ್ಕಾರ ಎಂದು ಆರೋಪಿಸಿದರು. ಇಲ್ಲಿದೆ ಡಾ. ಧನಂಜಯ ಸರ್ಜಿ ಭಾಷಣದ ಪ್ರಮುಖ 5 ಪಾಯಿಂಟ್ಸ್‌

1ಮೂರು ಸಿ ಸರ್ಕಾರ: ಕಾಂಗ್ರೆಸ್ ಸರ್ಕಾರವನ್ನು ಕಲೆಕ್ಷನ್ (Collection), ಕಮಿಷನ್ (sCommission) ಮತ್ತು ಕರಪ್ಷನ್ (Corruption) ಎಂಬ ಮೂರು ಸಿ ಗಳ ಸರ್ಕಾರ ಎಂದು ಟೀಕಿಸಿದರು.

2ಬೆಲೆ ಏರಿಕೆ: ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಬೆಲೆ ಏರಿಸದ ವಸ್ತುವಿಲ್ಲ ಎನ್ನುತ್ತಾ ಹಾಲು, ಮದ್ಯ, ದಿನಸಿ ಮತ್ತು ಪೆಟ್ರೋಲ್ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಲಾಗಿದೆ ಎಂದು ದೂರಿದರು.

BJP-Holds-protest-against-Excise-minister-in-Shimoga

3ವರ್ಗಾವಣೆ ಮತ್ತು ಕಮಿಷನ್ ದಂಧೆ: ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಬಿಲ್ಡಿಂಗ್ ಲೈಸೆನ್ಸ್ ಮತ್ತು ಮಂಜೂರಾತಿ ಪ್ರಕ್ರಿಯೆಗಳಲ್ಲಿ ಮಂತ್ರಿಗಳ ಮಟ್ಟದವರೆಗೆ ಕಮಿಷನ್ ತಲುಪುತ್ತಿದೆ ಎಂದು ಆರೋಪ ಮಾಡಿದರು.

4ಅಬಕಾರಿ ಇಲಾಖೆಯ ವಸೂಲಿ ದಂಧೆ: ಅಧಿಕಾರಿಗಳ ಮೇಲೆ 1.8 ಲಕ್ಷದಿಂದ 3.6 ಲಕ್ಷದವರೆಗೆ ವಸೂಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಮತ್ತು ಲೈಸೆನ್ಸ್ ರದ್ದು ಮಾಡುವ ಬೆದರಿಕೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

BJP-Holds-protest-against-Excise-minister-in-Shimoga

5ಆದಾಯದ ಗುರಿ ಮತ್ತು ಭ್ರಷ್ಟಾಚಾರ: ಬಿಜೆಪಿ ಕಾಲದಲ್ಲಿ 32 ಸಾವಿರ ಕೋಟಿ ಇದ್ದ ಅಬಕಾರಿ ಆದಾಯದ ಗುರಿಯನ್ನು ಈಗ 40 ಸಾವಿರ ಕೋಟಿಗೆ ಏರಿಸಲಾಗಿದೆ. ಈ 8 ಸಾವಿರ ಕೋಟಿ ವ್ಯತ್ಯಾಸವು ಕಲೆಕ್ಷನ್ ಮತ್ತು ಭ್ರಷ್ಟಾಚಾರಕ್ಕೆ ದಾರಿಯಾಗಿದೆ ಎಂದು ಆರೋಪಿಸಿದರು.

ಸಚಿವರ ಮೂಗಿನಡಿಯೇ ಭ್ರಷ್ಟಾಚಾರ

ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿ, ಅಬಕಾರಿ ಸಚಿವರ ಮೂಗಿನ ಕೆಳಗೆ ಭ್ರಷ್ಟಾಚಾರ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಅಂದರೆ ಅದಕ್ಕೆ ಸಚಿವರ ಪ್ರೇರಣೆ ಇದೆ ಎಂದರ್ಥ. ಸಚಿವ ತಿಮ್ಮಾಪುರ ಭ್ರಷ್ಟಚಾರಕ್ಕೆ ಅವಕಾಶ ಕೊಡದಿದ್ದರೆ ಹಗರಣಗಳು ನಡೆಯಲು ಸಾಧ್ಯವಿಲ್ಲ. ಸಚಿವರ ವರ್ತನೆ ಮತ್ತು ಅಕ್ರಮಗಳಲ್ಲಿನ ಭಾಗೀದಾರಿಕೆಯಿಂದಲೇ ಇಂದು ಅಬಕಾರಿ ಇಲಾಖೆಯು ಸಂಪೂರ್ಣ ಭ್ರಷ್ಟ ಇಲಾಖೆಯಾಗಿದೆ ಎಂದು ಆರೋಪಿಸಿದರು.

BJP-Holds-protest-against-Excise-minister-in-Shimoga.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್‌, ನಗರ ಅಧ್ಯಕ್ಷ ಮೋಹನ್‌ ರೆಡ್ಡಿ ಸೇರಿದಂತೆ ಹಲವರು ಇದ್ದರು. 

ಇದನ್ನೂ ಓದಿ – ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್‌ಮನ್‌, ಆಗಿದ್ದೇನು?

Shivamogga Live reached 2.8 million views in January-2026 - Editor : Nitin Kaidotlu

Leave a Comment