ನರಸೀಪುರದ ನಾಟಿ ಔಷಧ ವಿತರಣೆ ಪುನಾರಂಭ, ಆದರೆ ಸ್ಥಳ ಬದಲಾವಣೆ ಆಗಿದೆ, ಎಲ್ಲಿ ಗೊತ್ತಾ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

119060214 954258745054036 6933822829653446782 o.jpg? nc cat=105& nc sid=110474& nc ohc=jztG790PCawAX8gAOuD& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ | ANANDAPURA NEWS | 2 ನವೆಂಬರ್ 2020

ನರಸೀಪುರದ ನಾಟಿ ಔಷಧ ವಿತರಣಾ ಕಾರ್ಯ ಪುನಾರಂಭವಾಗಿದೆ. ಆದರೆ ಈ ಬಾರಿ ಸ್ಥಳ ಬದಲಾವಣೆ ಮಾಡಲಾಗಿದೆ. ನರಸೀಪುರ ಗ್ರಾಮದ ಬದಲು ಶಿವಗಂಗೆಯ ಗೋಡೋನ್ ಒಂದರಲ್ಲಿ ಔಷಧ ವಿತರಿಸಲಾಗುತ್ತಿದೆ.

ಸ್ಥಗಿತವಾಗಿತ್ತು ಔಷಧ ವಿತರಣೆ

ಕರೋನಾ ಲಾಕ್‍ಡೌನ್ ಪರಿಣಾಮ ಫೆಬ್ರವರಿಯಿಂದ ಔಷಧ ವಿತರಣೆ ಕಾರ್ಯ ಸ್ಥಗಿತವಾಗಿತ್ತು. ಜುಲೈ ತಿಂಗಳಲ್ಲಿ ನಾರಾಯಣಮೂರ್ತಿ ಅವರು ನಿಧನರಾದರು. ಈ ನಡುವೆ ನರಸೀಪುರಕ್ಕೆ ಬರುವ ಜನರು ಸ್ವಚ್ಛತೆ ಕಾಪಾಡುತ್ತಿಲ್ಲ ಮತ್ತು ಕರೋನಾ ಭೀತಿಯಿಂದ ಗ್ರಾಮಸ್ಥರು ಔಷಧ ವಿತರಣೆಗೆ ವಿರೋಧ ‍ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಬದಲಾವಣೆ ಅನಿವಾರ್ಯವಾಗಿತ್ತು.

ಎಲ್ಲಿಗೆ ಶಿಫ್ಟ್ ಆಗಿದೆ?

ಔಷಧ ವಿತರಣೆ ಕಾರ್ಯವನ್ನು ಆನಂದಪುರದ ನರಸೀಪುರ ಗ್ರಾಮದ ಬದಲು ಬೇರೆಡೆ ಸ್ಥಳಾಂತರಿಸಲಾಗಿದೆ. ಆನಂದಪುರ – ಶಿಕಾರಿಪುರ ಮಾರ್ಗದ ಶಿವಗಂಗೆ ಗ್ರಾಮದ ಗೋಡೋನ್ ಒಂದಕ್ಕೆ ಸ್ಥಳಾಂತರಿಸಲಾಗಿದೆ. ಗೋಡೋನ್‍ನಲ್ಲಿ ಔಷ‍ಧ ವಿತರಣೆಗೆ ಪರವಾನಗಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಔಷಧ ವಿತರಣೆ ಆರಂಭವಾಗಿದೆ.

ವಾರದಲ್ಲಿ ಎರೆಡು ದಿನ ಮಾತ್ರ ಔಷಧ

ಮಾಧ್ಯಮಗಳ ಜೊತೆ ಮಾತನಾಡಿದ ದಿವಂಗತ ನಾರಾಯಣಮೂರ್ತಿ ಅವರ ಪುತ್ರ ರಾಘವೇಂದ್ರ, ವಾರದಲ್ಲಿ ಎರಡು ದಿನ ಮಾತ್ರ ಔಷಧ ವಿತರಣೆ ಮಾಡಲಾಗುತ್ತದೆ. ಭಾನುವಾರ ಮತ್ತು ಗುರುವಾರ ಮಾತ್ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಔಷಧ ವಿತರಣೆ ಕಾರ್ಯ ನಡೆಯಲಿದೆ. ತಂದೆ ನೀಡಿದ ತರಬೇತಿ ಮತ್ತು ಮಾರ್ಗದರ್ಶನದಂತೆ ವಿವಿಧ ಕಾಯಿಲೆಗಳಿಗೆ ಔಷಧಿ ನೀಡಲಾತ್ತಿದೆ ಎಂದರು.

122336553 983106055502638 6844548172344119085 n.jpg? nc cat=107& nc sid=110474& nc ohc=JrLgAWzRixQAX9XQ8JM& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment