ಶಿವಮೊಗ್ಗ ಕೆಎಸ್ಆರ್‌ಟಿಸಿ ನಿಲ್ದಾಣದಿಂದ ರಸ್ತೆಗಿಳಿದ 16 ಬಸ್, ಯಾವ್ಯಾವ ರೂಟಲ್ಲಿ ಸಂಚರಿಸುತ್ತಿವೆ? ಹೇಗಿದೆ ಪರಿಸ್ಥಿತಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 DECEMBER 2020
➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ಸಾರಿಗೆ ನೌಕರರ ಮುಷ್ಕರದ ಗೊಂದಲ ಮುಂದುವರೆದಿದೆ. ಈ ನಡುವೆ ಶಿವಮೊಗ್ಗ ಬಸ್ ನಿಲ್ದಾಣದಿಂದ ಕೆಲವೆಡೆ ಬಸ್ ಸಂಚಾರ ಆರಂಭವಾಗಿದೆ.

ಭದ್ರಾವತಿ, ಮಣಿಪಾಲಕ್ಕೆ ಬಸ್

ಶಿವಮೊಗ್ಗದಿಂದ ವಿವಿಧೆಡೆಗೆ ಕೆಎಸ್ಆರ್‍ಟಿಸಿ ಬಸ್‍ ಸಂಚರಿಸುತ್ತಿವೆ. ಶಿವಮೊಗ್ಗ – ಭದ್ರಾವತಿ, ಶಿವಮೊಗ್ಗ – ಮಣಿಪಾಲ ರೂಟ್‍ನಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಉಳಿದಂತೆ ಮೈಸೂರು, ಚಿತ್ರದುರ್ಗ, ಹೊನ್ನಾಳಿ, ಶಿಕಾರಿಪುರದ ಕಡೆಗೆ ಬಸ್ಸುಗಳು ತೆರಳಿವೆ.

ಇದನ್ನೂ ಓದಿ | ಮುಷ್ಕರ ನಿಂತಿದೆ ಅಂತಾ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಕಾದಿತ್ತು ಶಾಕ್

16 ಬಸ್‍ಗಳಷ್ಟೇ ರಸ್ತೆಗಿಳಿದಿವೆ

ಶಿವಮೊಗ್ಗ ವಿಭಾಗದಲ್ಲಿ 330 ಬಸ್ಸುಗಳಿವೆ. ಮುಷ್ಕರದ ಅನಿಶ್ಚಿತತೆಯಿಂದಾಗಿ ಇವತ್ತು 16 ಬಸ್ಸುಗಳು ಮಾತ್ರ ರಸ್ತೆಗಿಳಿದಿವೆ. ಮುಷ್ಕರ ನಿಲ್ಲುತ್ತದೆಯೋ, ಮುಂದುವರೆಯುತ್ತದೆಯೋ ಎಂಬ ಗೊಂದಲದಿಂದಾಗಿ ಸಾರಿಗೆ ಇಲಾಖೆ ನೌಕರರು ನಿಲ್ದಾಣದ ಕಡೆಗೆ ಮುಖ ಮಾಡಿಲ್ಲ.

ಇದನ್ನೂ ಓದಿ | ಶಿವಮೊಗ್ಗ – ಭದ್ರಾವತಿ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಜೀಪ್‌ನಲ್ಲಿ ಎಸ್ಕಾರ್ಟ್, ಏನಿದು ಎಸ್ಕಾರ್ಟ್? ಕಾರಣವೇನು?

ನಿಲ್ದಾಣ ಖಾಲಿ ಖಾಲಿ

ಮುಷ್ಕರದಿಂದಾಗಿ ಬಸ್ಸುಗಳು ಸಂಚರಿಸದ ಹಿನ್ನೆಲೆ ಶಿವಮೊಗ್ಗ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಪ್ರಯಾಣಿಕರು ಇಲ್ಲದೆ, ಬಸ್ಸುಗಳೂ ಇಲ್ಲದೆ ನಿಲ್ದಾಣ ಬಣಗುಡುತ್ತಿದೆ.

ಇದನ್ನೂ ಓದಿ | ಸರ್ಕಾರಿ ಬಸ್ ಬಂದ್, ಶಿವಮೊಗ್ಗದಿಂದ ವಿವಿಧೆಡೆಗೆ ಖಾಸಗಿ ಬಸ್ ಸಂಚಾರ ಶುರು, ಎಲ್ಲಿಗೆಲ್ಲ ತೆರಳುತ್ತಿವೆ ಬಸ್ಸುಗಳು?

ರಾತ್ರಿ ಹೇಗಿತ್ತು ಬಸ್ ನಿಲ್ದಾಣ? ಏನಾಯ್ತು? ಇಲ್ಲಿದೆ ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment