
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 DECEMBER 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗದಲ್ಲೂ ರೂಪಾಂತರ ಕರೋನ ವೈರಸ್ ಭೀತಿ ಶುರುವಾಗಿದೆ. ಬ್ರಿಟನ್ ದೇಶದಿಂದ ಬಂದವರ ಕುರಿತು ಆತಂಕ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ ಭಯ ಬೇಡ ಅಂತಾ ಜಿಲ್ಲಾಡಳಿತ ತಿಳಿಸಿದೆ.
ಅಧಿಕಾರಿಗಳ ಜೊತೆ ಮೀಟಿಂಗ್
ರೂಪಾಂತರ ಕರೋನ ಮತ್ತು ಅದರ ಬಗ್ಗೆ ಜಾಗೃತಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ‍್ವರಪ್ಪ, ಇವತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕರೋನದ ಚಿಕಿತ್ಸೆ ಕುರಿತು ಎಚ್ಚರ ವಹಿಸುವಂತೆ ಸೂಚಿಸಿದರು.
ರೂಪಾಂತರ ವೈರಸ್ ಭಯ ಬೇಡ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಬ್ರಿಟನ್‍ನಿಂದ ಬಂದಿರುವ 23 ಮಂದಿಗೆ ಕರೋನ ಪರೀಕ್ಷೆ ನಡೆಸಲಾಗಿದೆ. ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.
ಸಚಿವರು ಏನಂದರು? ವಿಡಿಯೋ ರಿಪೋರ್ಟ್
ಯಾವಾಗ ಬರಲಿದೆ ವರದಿ?
ರಾಜ್ಯ ಸರ್ಕಾರ ನೀಡಿದ ಮಾಹಿತಿ ಆಧಾರದ ಮೇಲೆ ಬ್ರಿಟನ್‍ನಿಂದ ಬಂದವರನ್ನು ಶಿವಮೊಗ್ಗದಲ್ಲಿ ಪತ್ತೆ ಹಚ್ಚಲಾಗಿದೆ. 23 ಮಂದಿಗೆ ಪರೀಕ್ಷೆ ನಡೆಸಿ, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಮಾದರಿಗಳನ್ನು ಕಳುಹಿಸಲಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ವರದಿ ಪ್ರಕಟವಾಗುವ ಸಾದ್ಯತೆ ಇದೆ.
ಸ್ಟಿಕ್ಕರ್, ಸುತ್ತಮುತ್ತ ಸ್ಯಾನಿಸಟೈಸ್
ಇನ್ನು, ಬ್ರಿಟನ್‍ನಿಂದ ಬಂದವರನ್ನು ಹೋಂ ಐಸೊಲೇಷನ್ ಮಾಡಲಾಗಿದೆ. ಮನೆ ಮುಂದೆ ಸ್ಟಿಕ್ಕರ್ ಅಂಟಿಸಲಾಗಿದೆ. ಅಲ್ಲದೆ ಮನೆ ಸುತ್ತಮುತ್ತ ಸ್ಯಾನಿಟೈಸ್ ಕೂಡ ಮಾಡಲಾಗಿದೆ. ಶಿವಮೊಗ್ಗ ನಗರದ ಒಂದು ಪ್ರಕರಣದಲ್ಲಿ, ಬ್ರಿಟನ್‍ನಿಂದ ಬಂದ ವ್ಯಕ್ತಿಯ ಮನೆಯ ಸುತ್ತಮುತ್ತಲು ವಾಸಿಸುತ್ತಿರುವವರ ಆರ್‍ಟಿಪಿಎಸ್ ಪರೀಕ್ಷೆ ನಡೆಸಲು ಪಾಲಿಕೆ ಯೋಜಿಸಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






