ಆಯನೂರು: ದೇವಸ್ಥಾನದ ಬಳಿ ಸಿಕ್ಕ ಪರ್ಸ್ (purse) ಅನ್ನು ಆಯನೂರು ನಿವಾಸಿಗಳು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಇದನ್ನೂ ಓದಿ – ಶಿವಮೊಗದಲ್ಲಿ ವಿದ್ಯಾರ್ಥಿಗಳೇ ಟ್ರಾಫಿಕ್ ಪೊಲೀಸರಾದರು, ಸಂಚಾರ ನಿಯಂತ್ರಿಸಿದರು, ಕಾರಣವೇನು?

ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಅವರಿಗೆ ಜನವರಿ 17ರಂದು ಆಯನೂರು ಸರ್ಕಲ್‌ನ ಗಣಪತಿ ದೇವಸ್ಥಾನದ ಮುಂಭಾಗ ಪರ್ಸ್ ಸಿಕ್ಕಿತ್ತು. ಅದರಲ್ಲಿ ₹10,000 ನಗದು ಮತ್ತು ಪ್ರಮುಖ ದಾಖಲೆಗಳಿದ್ದವು. ತಕ್ಷಣವೇ ಅದನ್ನು ಕುಂಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ಒಪ್ಪಿಸಿದ್ದರು.

ಪರ್ಸ್‌ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಪೊಲೀಸರು ಅದು ಚಿಕ್ಕಮತಲಿ ಗ್ರಾಮದ ಬಲರಾಮ್ ಎಂಬುವವರಿಗೆ ಸೇರಿದ್ದೆಂದು ಗುರುತಿಸಿದ್ದರು. ಅವರನ್ನು ಠಾಣೆಗೆ ಕರೆಸಿ ಪರ್ಸ್ ಹಸ್ತಾಂತರಿಸಿದ್ದಾರೆ. ಕಳೆದುಹೋದ ಹಣ ಮತ್ತು ದಾಖಲೆಯನ್ನು ಪ್ರಾಮಾಣಿಕವಾಗಿ ಮರಳಿಸಿದ ಈ ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಕಾರ್ಯಕ್ಕೆ ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರೆ.
