ಶಿವಮೊಗ್ಗದಲ್ಲಿ ರೂಪಾಂತರಿ ವೈರಸ್, ಮನೆ ಮತ್ತೊಮ್ಮೆ ಸ್ಯಾನಿಟೈಸ್, ನಾಲ್ವರು ವಿದೇಶದಿಂದ ಬಂದಿದ್ಯಾವಾಗ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020

ವಿದೇಶದಿಂದ ಶಿವಮೊಗ್ಗಕ್ಕೆ ಹಿಂತಿರುಗಿದ್ದ ನಾಲ್ವರಲ್ಲಿ ರೂಪಾಂತರಿ ಕರೋನ ವೈರಸ್ ಕಾಣಿಸಿಕೊಂಡಿದೆ. ಹಾಗಾಗಿ ಅವರ ಮನೆಯನ್ನು ಇವತ್ತು ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಯಿತು.

ಟೈಮ್‍ ಲೈನ್‍

ಡಿಸೆಂಬರ್ 22 : ರಾತ್ರಿ ಬ್ರಿಟನ್‍ನಿಂದ ನಾಲ್ಕು ಮಂದಿ ಶಿವಮೊಗ್ಗಕ್ಕೆ ಬಂದಿದ್ದರು.

ವೀರ ಸಾವರ್ಕರ್ ನಗರದಲ್ಲಿರುವ ಮನೆಗೆ ಬಂದಿದ್ದ ಇವರು ಮನೆಯಲ್ಲಿ ರಾತ್ರಿ ಉಳಿದಿದ್ದರು.

ಡಿಸೆಂಬರ್ 23 : ಬೆಳಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಇವರನ್ನು ಕರೋನ ಪರೀಕ್ಷೆಗೆ ಒಳಪಡಿಸಿದಾಗ, ಸೋಂಕು ದೃಢಪಟ್ಟಿತ್ತು.

ಪಾಸಿಟಿವ್ ಬಂದ ಹಿನ್ನೆಲೆ ಬ್ರಿಟನ್‍ನಿಂದ ಬಂದಿದ್ದ ನಾಲ್ವರ ಸ್ಯಾಂಪಲ್‍ಗಳನ್ನು ಬೆಂಗಳೂರಿಗೆ ಕಳುಹಿಸಲಾಯಿತು.

ಅದೇ ದಿನ ಮನೆಯನ್ನು ಸೀಲ್‍ ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಯಿತು.

ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಕರೋನ ಪರೀಕ್ಷೆಗೆ ಒಳಪಡಿಸಲಾಯಿತು.

ಡಿಸೆಂಬರ್ 23ರಿಂದ ಜನವರಿ 5ರವರೆಗೆ ಯಾರೂ ಮನೆ ಪ್ರವೇಶಿಸದಂತೆ ಗೇಟ್ ಮುಂದೆ ಸ್ಟಿಕ್ಕರ್ ಅಂಟಿಸಲಾಗಿದೆ.

ಇದನ್ನೂ ಓದಿ | BREAKING NEWS | ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ರೂಪಾಂತರಿ ಕರೋನ ವೈರಸ್ ಪತ್ತೆ

ಡಿಸೆಂಬರ್ 30 : ಎರಡು ಹಂತದ ಪರಿಶೀಲನೆ ಬಳಿಕ, ಈ ಮನೆಗೆ ಬಂದಿದ್ದ ನಾಲ್ವರಿಗೆ ರೂಪಾಂತರಿ ಕರೋನ ವೈರಸ್ ತಗುಲಿರುವುದು ದೃಢವಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಘೋಷಣೆ ಮಾಡಿದರು.

ರೂಪಾಂತರಿ ಕರೋನ ತಗುಲಿರುವುದರಿಂದ ವೀರ ಸಾವರ್ಕರ್ ನಗರದಲ್ಲಿರುವ ಮನೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಯಿತು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಬ್ರಿಟನ್ ವೈರಸ್, ಆರೋಗ್ಯ ಇಲಾಖೆ ಅಧಿಕಾರಿಗಳ ಮುಂಜಾಗ್ರತೆಯಿಂದ ತಪ್ಪಿತು ದೊಡ್ಡ ಅನಾಹುತ

ವೈರಸ್‍ನ ಗುಣಲಕ್ಷಣ, ಜನರು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕುರಿತು ಮಹಾನಗರ ಪಾಲಿಕೆ ವತಿಯಿಂದ ಸಾರ್ವಕರ್ ನಗರದಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಲಾಯಿತು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment