BREAKING NEWS | ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ರೂಪಾಂತರಿ ಕರೋನ ವೈರಸ್ ಪತ್ತೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020

ವಿದೇಶದಿಂದ ಶಿವಮೊಗ್ಗಕ್ಕೆ ಹಿಂತಿರುಗಿರುವ ನಾಲ್ಕು ಮಂದಿಯಲ್ಲಿ ರೂಪಾಂತರಿ ಕರೋನ ವೈರಸ್ ಪತ್ತೆಯಾಗಿದೆ. ಇನ್ನು, ಇವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಮೂವರಲ್ಲೂ ಸೋಂಕು ಕಾಣಿಸಿಕೊಂಡಿದೆ.

ನಾಲ್ಕು ಮಂದಿಗೆ ಸೋಂಕು ದೃಢ

  • ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ರೂಪಾಂತರ ಕರೋನ ವೈರಸ್ ಪತ್ತೆಯಾಗಿದೆ ಎಂದರು.
  • ಇವರೊಂದಿಗೆ ಏಳು ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಅವರಿಗೂ ಕರೋನ ಪರೀಕ್ಷೆ ನಡೆಸಲಾಗಿದೆ.
  • ಏಳು ಮಂದಿಯ ಪೈಕಿ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ಇದು ರೂಪಾಂತರಿ ವೈರಸ್ ಹೌದೋ ಅಲ್ಲವೋ ಅನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
  • ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ.

ಕೇಂದ್ರಕ್ಕೂ ಕಳಿಸಲಾಗಿತ್ತು ಸ್ಯಾಂಪಲ್

ರೂಪಾಂತರಿ ವೈರಸ್ ಪತ್ತೆಗೆ ಬೆಂಗಳೂರಿನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಆ ಬಳಿಕ ಸ್ಯಾಂಪಲ್‍ಗಳನ್ನು ಕೇಂದ್ರಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ನಾಲ್ಕು ಮಂದಿಗೆ ರೂಪಾಂತರಿ ಕರೋನ ವೈರಸ್ ತಗುಲಿದೆ ಎಂದು ದೃಢಪಟ್ಟಿದೆ ಅಂತಾ ಸಚಿವ ಡಾ.ಸುಧಾಕರ್ ತಿಳಿಸಿದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment