ಶಿವಮೊಗ್ಗ ಲೈವ್.ಕಾಂ | SHIMOGA NEWS | 21 JANUARY 2021
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗಿದೆ. ಗಾಬರಿಯಾದ ಜನರು ಮನೆಯಿಂದ ಹೊರ ಬಂದು ನಿಂತಿದ್ದಾರೆ.
ಎರಡು ಭಾರಿ ಶಬ್ದ
ಜಿಲ್ಲೆಯಾದ್ಯಂತ ಎರಡು ಭಾರಿ ಶಬ್ದ ಕೇಳಿಸಿದೆ. ಮೊದಲ ಬಾರಿಗೆ ಕಡಿಮೆ ಶಬ್ದ ಇತ್ತು. ಎರಡನೆ ಭಾರಿ ಜೋರು ಶಬ್ದ ಕೇಳಿಸಿದೆ. ರಾತ್ರಿ 10.21ರ ಹೊತ್ತಿಗೆ ಮೊದಲು ಶಬ್ದ ಕೇಳಿಸಿದೆ. 10.23ರ ವೇಳೆಗೆ ಎರಡನೆ ಸರ್ತಿ ಭಾರಿ ಶಬ್ದ ಕೇಳಿಸಿದೆ.
ಭೂಕಂಪದ ಅನುಭವ
ಸ್ಫೋಟದ ಶಬ್ದದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆ ಬಾಗಿಲು, ಕಿಟಕಿಗಳು ತೆರೆದುಕೊಂಡಿವೆ. ಕೆಲವು ಕಡೆ ಗಾಜು ಪುಡಿಪುಡಿಯಾಗಿರುವ ವರದಿಯಾಗಿದೆ. ಮನೆಯಲ್ಲಿನ ವಸ್ತುಗಳು ಕೆಳಗೆ ಬಿದ್ದಿದೆ ಎಂದು ತಿಳಿದು ಬಂದಿದೆ. ಇದರಿಂದ ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಬಂದು ನಿಂತಿದ್ದಾರೆ.

ಎಲ್ಲೆಲ್ಲಿ ಶಬ್ದ ಕೇಳಿದೆ?
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಶಬ್ದ ಕೇಳಿದೆ. ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಸಾಗರ ಸೇರಿದಂತೆ ವಿವಿಧೆಡೆ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗಿದೆ. ಈ ಕುರಿತು ಜಿಲ್ಲಾಡಳಿತ, ಅಧಿಕಾರಿಗಳು ಯಾವುದನ್ನು ಖಚಿತ ಪಡಿಸಿಲ್ಲ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
