ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021
ಕಲ್ಲು ಕ್ವಾರಿಗಳಲ್ಲಿ ಪ್ರಭಾವಿಗಳು ಹೆಚ್ಚಾಗಿದ್ದಾರೆ. ರಾಜಕಾರಣಿಗಳನ್ನೆ ಅವರು ಆಟ ಆಡಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಆರೋಪಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಲ್ಲಗಂಗೂರು ಸ್ಪೋಟ ಪ್ರಕರಣ ಸಂಬಂಧ ವಿಧಾನ ಪರಿಷತ್‍ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಪ್ರಸನ್ನಕುಮಾರ್, ಕಲ್ಲು ಕ್ವಾರಿಯವರು ಎಷ್ಟು ಪ್ರಭಾವಿಗಳಾಗಿದ್ದಾರೆ ಅಂದರೆ, ಈ ಹಿಂದೆ ಜಿಯಾಲಾಜಿಸ್ಟ್ ಒಬ್ಬರನ್ನು ವರ್ಗಾಯಿಸಲಾಗಿತ್ತು. ಆದರೆ ಅವರು ಅಧಿಕಾರ ಬಿಟ್ಟುಕೊಡಲು ಒಂದು ವರ್ಷ ತೆಗೆದುಕೊಂಡಿದ್ದರು. ಅಲ್ಲಿಯ ತನಕ ಅವರು ಅಧಿಕಾರ ನಡೆಸಿದ್ದರು ಎಂದರು.
ಇದನ್ನು ಓದಿ | ಕಲ್ಲಗಂಗೂರು ಸ್ಪೋಟ ಕೇಸ್, ಪರಿಷತ್‌ನಲ್ಲಿ ಆಯನೂರು ಮಂಜುನಾಥ್ ಖಡಕ್ ಚರ್ಚೆ
ಶಿಕಾರಿಪುರ ರೈಲ್ವೆಗೆ ಜೆಲ್ಲಿ ವದಂತಿ
ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಹೆಚ್ಚು ಜೆಲ್ಲಿ ಬೇಕು ಎಂಬ ವದಂತಿ ಹಬ್ಬಿದೆ. ಇದೆ ಕಾರಣಕ್ಕೆ ಹೆಚ್ಚು ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಜೆಲ್ಲಿ ಶೇಖರಣೆ ಮಾಡಲಾಗುತ್ತಿರುವ ಸಾಧ್ಯತೆ ಇದೆ.
ಇದನ್ನು ಓದಿ | ಕಲ್ಲಗಂಗೂರು ಸ್ಪೋಟ ಕೇಸ್ ವಿಧಾನಸಭೆಯಲ್ಲಿ ಪ್ರಸ್ತಾಪ, ಸಿದ್ದರಾಮಯ್ಯ ಹೇಳಿದ್ದೇನು?
ವೈಜ್ಞಾನಿಕವಾಗಿ ಬ್ಲಾಸ್ಟಿಂಗ್ ಮಾಡ್ತಿಲ್ಲ
ಕಲ್ಲಗಂಗೂರು ಸೇರಿದಂತೆ ಸುತ್ತಮತ್ತಲು ಕ್ವಾರಿಗಳಲ್ಲಿ ವೈಜ್ಞಾನಿಕವಾಗಿ ಸ್ಪೋಟ ಮಾಡುತ್ತಿಲ್ಲ. ಇದರ ವಿರುದ್ಧ ದೂರು ನೀಡಿ ಜನರು ಬೇಸತ್ತು ಹೋಗಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಕ್ರಷರ್ ಲಾರಿಗಳು ಓಡಾಡುತ್ತಿರುತ್ತವೆ. ಇದು ಕೂಡ ಜನರಲ್ಲಿ ಸಂಕಷ್ಟ ತಂದೊಡ್ಡಿದೆ.
ಕಲ್ಲು ಗಣಿಗಾರಿಕೆ ಮಾತ್ರವಲ್ಲ, ಮರಳು ದಂಧೆಯೂ ಜೋರಾಗಿ ನಡೆಯುತ್ತಿದೆ. ಎರಡರಿಂದಾಗಿ ದೊಡ್ಡ ಸಮಸ್ಯೆಯಾಗುತ್ತಿದೆ ಎಂದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]