ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

SHIMOGA : ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಚಂದ್ರಗ್ರಹಣ ಹಿನ್ನಲೆ ಈ ಬಾರಿ ಬೆಳಗ್ಗೆ ರಥೋತ್ಸವ (Rathotsava) ನೆರವೇರಿಸಲಾಯಿತು. ಮಧ್ಯಾಹ್ನದವರೆಗೆ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ರಥವನ್ನು ನಿಲ್ಲಿಸಲಾಗುತ್ತದೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ವೈಭವದ ರಥೋತ್ಸವ

Durgigudi-Ratotsava-in-Shimoga

ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಪಲ್ಲಕ್ಕಿಯಲ್ಲಿ ದೇವರನ್ನು ತಂದು ರಥದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇಗುಲದ ಮುಂಭಾಗದಿಂದ ದುರ್ಗಿಗುಡಿ ಮುಖ್ಯರಸ್ತೆವರೆಗೆ ಭಕ್ತರು ರಥವನ್ನು ಎಳೆದು ದೇವರ ಆಶೀರ್ವಾದ ಬೇಡಿದರು.

Durgigudi-Ratotsava-in-Shimoga

ಚಂದ್ರಗ್ರಹಣ ಹಿನ್ನೆಲೆ ಬೇಗ ರಥೋತ್ಸವ

ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿ ರಥೋತ್ಸವವು ಸಾಮಾನ್ಯವಾಗಿ ಮಧ್ಯಾಹ್ನ ಹೊತ್ತಿಗೆ ನಡೆಯುತ್ತದೆ. ಆದರೆ ಇವತ್ತು ಚಂದ್ರಗ್ರಹಣ ಹಿನ್ನೆಲೆ ಈ ಬಾರಿ ಬೆಳಗ್ಗೆ ರಥೋತ್ಸವ ನಡೆಯಿತು. ಮಧ್ಯಾಹ್ನ 1.30ರವರೆಗೆ ರಥವು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ನಿಲ್ಲಲಿದೆ. ಭಕ್ತರು ಇಲ್ಲಿಯೇ ಬಂದು ದೇವರಿಗೆ ಪೂಜೆ ಸಲ್ಲಿಸಿ, ಹಣ್ಣು ಕಾಯಿ ಮಾಡಿಸಿಬಹುದಾಗಿದೆ. ರಥೋತ್ಸವದ ಸಂದರ್ಭ ಅನ್ನಸಂತರ್ಪಣೆ, ನೀರು, ಪಾನಕ ವಿತರಣೆ ಮಾಡಲಾಯಿತು.

ಇನ್ನು, ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವದ ಬಳಿಕವೇ ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬ ಆಚರಿಸುವುದು ವಾಡಿಕೆ.

ಇದನ್ನೂ ಓದಿ – ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment