BHADRAVATHI | ಭದ್ರಾವತಿ ಅಂತರಗಂಗೆಯ ಪ್ರತೀಕ್ಷಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 01 FEBRUARY 2021

ಇಂಡಿಯಾ ಬುಕ್ ಆಫ್ ರೆಕಾರ್ಡಸ್‌ ಪ್ರಶಸ್ತಿ ಪಡೆದ ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮದ ಪ್ರತೀಕ್ಷಾಗೆ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಪ್ರಶಸ್ತಿ ಪತ್ರ ನೀಡಿದರು.

ಪ್ರಶಸ್ತಿ ಪತ್ರ ವಿತರಿಸಿದ ಶಾಸಕ ಸಂಗಮೇಶ್ವರ್, ಪ್ರತೀಕ್ಷಾ ಬಯಸುವ ಶಾಲೆಯಲ್ಲಿ ಉಚಿತ ಶಿಕ್ಷಣ ಕೊಡಿಸುವುದಾಗಿ  ಭರವಸೆ ನೀಡಿದರು. ಈ ವಯಸ್ಸಿನಲ್ಲಿ ಈಕೆಯ ಸಾಧನೆ ಕ್ಷೇತ್ರದ ಜನರಿಗೆ ಸಂತಸ ಮೂಡಿಸಿದೆ ಎಂದು ತಿಳಿಸಿದರು.

ಯಾರಿದು ಪ್ರತೀಕ್ಷಾ? ಏನಿದು ಸಾಧನೆ?

ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ, ಪ್ರಧಾನಿಯ ಹೆಸರನ್ನು ಪಟಪಟನೆ ಹೇಳುತ್ತಾಳೆ ಮೂರು ವರ್ಷದ ಪ್ರತೀಕ್ಷಾ. ದೇಶಗಳ ಹೆಸರು, ರಾಷ್ಟ್ರಗೀತೆ, ರಾಷ್ಟ್ರಧ್ವಜ, ವಾಹನಗಳು, ದೇವರು ಸೇರಿದಂತೆ ವಿವಿಧ ವಿಷಯಗಳ ಕುರಿತು ಅರಳು ಹುರಿದಂತೆ ಹೇಳುತ್ತಾಳೆ ಪ್ರತೀಕ್ಷಾ.

ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಇಂಡಿಯಾ ಬುಕ್ ಆಫ್‍ ರೆಕಾರ್ಡ್ಸ್ ಆನ್‍ಲೈನ್‍ ಸ್ಪರ್ಧೆಯಲ್ಲಿ ಪ್ರತೀಕ್ಷಾ ಗೆಲುವು ಸಾಧಿಸಿದ್ದಾರೆ. ಅಂಚೆ ಮೂಲಕ ಪ್ರಶಸ್ತಿ ಪತ್ರ ಬಂದಿದೆ.

ಪ್ರತೀಕ್ಷಾ, ಅಂತರಗಂಗೆ ಗ್ರಾಮದ ಪ್ರದೀಪ್‍ ಕುಮಾರ್, ಸಿಂಧು ದಂಪತಿಯ ಪುತ್ರಿ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment