ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಕಾಣಿಸಿದ ಕಾಡಾನೆ, ಲಕ್ಕಿನಕೊಪ್ಪದಲ್ಲಿ ತೋಟಕ್ಕೆ ದಾಳಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA CITY NEWS | 26 FEBRUARY 2021

ಕಾಡಾನೆಯೊಂದು ಲಕ್ಕಿನಕೊಪ್ಪದ ತೋಟವೊಂದಕ್ಕೆ ನುಗ್ಗಿ ಅಡಕೆ ಮರ, ಬಾಳೆಗಿಡಗಳನ್ನು ಹಾಳುಗೆಡವಿದೆ. ಇದು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ | SHIMOGA | ಅಪರೇಷನ್ ಮುಗಿದು ವಾರ ಕಳೆಯೋದರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ತೋಟಗಳಿಗೆ ದಾಳಿ

ಲಕ್ಕಿನಕೊಪ್ಪದ ಮಂಜುನಾಥ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಯೊಂದು, ತೋಟವನ್ನು ಹಾನಿಗೊಳಿಸಿದೆ. ಬುಧವಾರ ರಾತ್ರಿ ಕಾಡನೆ ದಾಳಿ ಮಾಡಿದೆ. ಆನೆ ದಾಳಿ ಮತ್ತಷ್ಟು ಹೆಚ್ಚಳವಾಗುವ ಆತಂಕ ರೈತರಲ್ಲಿದೆ.

ಉಂಬ್ಳೆಬೈಲು ವಲಯ ಅರಣ್ಯ ವ್ಯಾಪ್ತಿಯಲ್ಲಿ ಆಗಾಗ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅರಣ್ಯ ಇಲಾಖೆ ವತಿಯಿಂದ ‘ಆಪರೇಷನ್ ಡ್ರೈವಿಂಗ್’ ನಡೆಸಲಾಗಿತ್ತು. ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ಕರೆಯಿಸಿಕೊಂಡು, ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸಲಾಗಿತ್ತು. ಕಾರ್ಯಾಚರಣೆ ನಡೆದು ಕೆಲವೆ ದಿನದಲ್ಲಿ ಕಾಡಾನೆಗಳು ಮತ್ತೆ ಕಾಣಿಸಿಕೊಂಡಿವೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment