ಖಾಸಗಿ ಆಸ್ಪತ್ರೆ, ಗೂಡ್ಸ್‌ ವಾಹನ ಡಿಕ್ಕಿ, ವಾಹನಗಳು ನಜ್ಜುಗುಜ್ಜು

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ

ಖಾಸಗಿ ಬಸ್ ಹಾಗೂ ಗೂಡ್ಸ್ ವಾಹನದ ಮಧ್ಯೆ ಅಪಘಾತ ಸಂಭವಿಸಿದ್ದು, ವಾಹನ ಚಾಲಕರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಘಂಟೆಹಕ್ಲು ಬಳಿ ಘಟನೆ ಸಂಭವಿಸಿದೆ.

Bus-and-Goods-Vehicle-incident-at-Gantehakkalu-in-Thirthahalli.

ತೀರ್ಥಹಳ್ಳಿ-ಉಡುಪಿ ಮಾರ್ಗ ಮಧ್ಯದ ಘಂಟೆಹಕ್ಲು ಬಳಿ ಘಟನೆ ನಡೆದಿದೆ. ಎರಡೂ ವಾಹನಗಳ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದಲ್ಲಿ ವಾಹನಗಳ ಚಾಲಕರಿಗೆ ಗಾಯವಾಗಿವೆ. ಅವರನ್ನು ಚಿಕಿತ್ಸೆಗಾಗಿ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆಯಾಗಿದೆ.