ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 MARCH 2021
ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತನೊಬ್ಬ, ಸಾಗರ ತಾಲೂಕಿನ ವ್ಯಕ್ತಿಯೊಬ್ಬರಿಗೆ 1.65 ಲಕ್ಷ ರೂ. ವಂಚನೆ ಮಾಡಿದ್ದಾನೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ | ಮೌಸ್ ಬುಕ್ ಮಾಡಲು ಹೋಗಿ 65 ಸಾವಿರ ಕಳೆದುಕೊಂಡ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ
ಸಾಗರ ತಾಲೂಕಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತ, ತನ್ನನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಖಾತೆಯಲ್ಲಿ ಎರಡು ಲಕ್ಷಕ್ಕಿಂತಲೂ ಹೆಚ್ಚಿಗೆ ಹಣವಿದೆ. 80 ಸಾವಿರ ರುಪಾಯಿಯನ್ನು ಡೆಪಾಸಿಟ್ ಮಾಡಿಕೊಳ್ಳುತ್ತೇವೆ. ಹತ್ತು ವರ್ಷದ ಬಳಿಕ ನಿಮಗೆ 1.40 ಲಕ್ಷ ರೂ. ಸಿಗಲಿದೆ ಎಂದು ತಿಳಿಸಿದ. ಆದರೆ ಸಾಗರದ ವ್ಯಕ್ತಿ ಇದಕ್ಕೆ ಒಪ್ಪದಿದ್ದಾಗ ಅಪರಿಚಿತ ವರಸೆ ಬದಲಿಸಿದ್ದ.
ವಂಚನೆಯ ಹೊಸ ಪ್ಲಾನ್ ರೆಡಿ
80 ಸಾವಿರ ರೂ. ಡೆಪಾಸಿಟ್ ಮಾಡಿಕೊಳ್ಳುವ ವಿಚಾರ ಕೈಬಿಟ್ಟ ವಂಚಕ, ಪ್ಲಾನ್ ಕ್ಯಾನ್ಸಲ್ ಮಾಡ್ತೀವಿ. ಅದಕ್ಕಾಗಿ ನಿಮ್ಮ ಮೊಬೈಲ್‍ಗೆ ಬಂದಿರುವ ಒಟಿಪಿ ಕಳುಹಿಸಿ ಎಂದು ತಿಳಿಸಿದ್ದಾನೆ. ಸಾಗರದ ವ್ಯಕ್ತಿ ಒಟಿಪಿ ಕಳುಹಿಸಿದ್ದಾರೆ. ಮರುದಿನ ಮತ್ತೆ ಕರೆ ಮಾಡಿದ ವಂಚಕ, ಮ್ಯಾನೇಜರ್ ಸೋಗಿನಲ್ಲಿ ಮಾತನಾಡಿದ, ಪುನಃ ಒಟಿಪಿ ಕೇಳಿದ್ದಾನೆ. ಸಾಗರದ ವ್ಯಕ್ತಿ ಒಟಿಪಿ ಒದಗಿಸಿದ್ದಾರೆ.
ಎಳು ಭಾರಿ ಒಟಿಪಿ ಪಡೆದ
ಡೂಪ್ಲಿಕೇಟ್ ಮ್ಯಾನೇಜರ್ ಒಟ್ಟು ಏಳು ಭಾರಿ ಒಟಿಪಿ ಪಡೆದುಕೊಂಡಿದ್ದಾನೆ. ಈ ಅವಧಿಯಲ್ಲಿ ಸುಮಾರು 1.65 ಲಕ್ಷ ರೂ. ಹಣವನ್ನು ಸಾಗರದ ವ್ಯಕ್ತಿಯ ಅಕೌಂಟ್‍ನಿಂದ ವರ್ಗಾವಣೆ ಮಾಡಿಕೊಂಡಿದ್ದಾನೆ. ಅನುಮಾನದ ಮೇರೆಗೆ ಸಾಗರದ ವ್ಯಕ್ತಿಯು ತಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿದಾಗ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್ಚರ, ಕಟ್ಟೆಚ್ಚರ
ಬ್ಯಾಂಕ್ ಮ್ಯಾನೇಜರ್, ಬ್ಯಾಂಕ್ ಸಿಬ್ಬಂದಿ ಹೀಗೆ, ಹಲವು ಸೋಗಿನಲ್ಲಿ ವಂಚಕರು ಕರೆ ಮಾಡಿ, ಒಟಿಪಿ ಪಡೆದುಕೊಳ್ಳುತ್ತಾರೆ. ಯಾವುದೆ ಕಾರಣಕ್ಕೂ ಜನರು ಒಟಿಪಿ ಒದಗಿಸಬಾರದು ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಯಾವುದೇ ಸಮಸ್ಯೆ ಉಂಟಾದರೂ ಬ್ಯಾಂಕ್‍ನ ಶಾಖೆಗೆ ತೆರಳಿ ನೇರವಾಗಿಯೇ ಬಗೆಹರಿಸಿಕೊಂಡರೆ ವಂಚಕರ ಬಲೆಗೆ ಬೀಳುವುದು ತಪ್ಪಲಿದೆ.
ಇದನ್ನೂ ಓದಿ | ಕೌನ್ ಬನೇಗಾ ಕರೋಡ್‌ಪತಿ ಹೆಸರಲ್ಲಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ 1.43 ಲಕ್ಷ ರೂ. ವಂಚನೆ, ವಂಚಿಸಿದ್ದು ಹೇಗೆ?
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]