ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 27 MARCH 2021
ಎರಡನೇ ಅಲೆಯ ಭೀತಿಯ ನಡುವೆ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಕ್ತ ನೂರಕ್ಕೂ ಹೆಚ್ಚು ಮಂದಿ ಕರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ 124 ಮಂದಿಗೆ ಕರೋನ ಸೋಂಕು ತಗುಲಿದ್ದು, ಚಿಕಿತ್ಸೆಯಲ್ಲಿದ್ದಾರೆ.
20 ಮಂದಿಗೆ ಪಾಸಿಟಿವ್
ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ 26ರಂದು 2452 ಸ್ಯಾಂಪಲ್ಗಳನ್ನ ಪಡೆಯಲಾಗಿದೆ. ಈ ಪೈಕಿ 1684 ಸ್ಯಾಂಪಲ್ಗಳು ಕರೋನ ನೆಗೆಟಿವ್ ಬಂದಿದೆ. ಮೂವರು ವಿದ್ಯಾರ್ಥಿಗಳು ಸೇರಿ 20 ಮಂದಿಯ ವರದಿ ಪಾಸಿಟಿವ್ ಬಂದಿದೆ.
ಯಾವ್ಯಾವ ತಾಲೂಕಲ್ಲಿ ಎಷ್ಟು ಪಾಸಿಟಿವ್?
ಮಾರ್ಚ್ 26ರಂದು 20 ಮಂದಿಗೆ ಪಾಸಿಟವ್ ಬಂದಿದ್ದು, ಶಿವಮೊಗ್ಗ ತಾಲೂಕಿನ 7, ಭದ್ರಾವತಿಯ 2, ಶಿಕಾರಿಪುರದ 1, ತೀರ್ಥಹಳ್ಳಿಯ 2, ಸೊರಬದ 2, ಸಾಗರ 3, ಇತರೆ ಜಿಲ್ಲೆಯ 3 ಮಂದಿಗೆ ಕರೋನ ಪಾಸಿಟಿವ್ ಬಂದಿದೆ.
ಎಲ್ಲೆಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ?
ಜಿಲ್ಲೆಯಲ್ಲಿ ಸದ್ಯ 124 ಮಂದಿ ಕರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 53 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 28, ಮನೆಯಲ್ಲಿ ಐಸೊಲೇಷನ್ಗೆ ಒಳಗಾದವರ ಸಂಖ್ಯೆ 43 ಇದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈತನಕ 349 ಮಂದಿ ಕರೋನಾದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422