ತೀರ್ಥಹಳ್ಳಿ ತಾಲೂಕಿನ ಯಾವ್ಯಾವ ಹಳ್ಳಿಯಲ್ಲಿ ಎಷ್ಟೆಷ್ಟಿದೆ ಕರೋನ ಕೇಸ್? ಇಲ್ಲಿದೆ ಗ್ರಾಮ ಪಂಚಾಯಿತಿವಾರು ಡಿಟೇಲ್ಸ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021 ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಕರೋನ ಈಗ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಸಾವು, ನೋವು ಉಂಟು ಮಾಡುತ್ತಿದೆ. ಇದು ಜನರಲ್ಲಿ ಭೀತಿ ಹೆಚ್ಚಿಸಿದೆ. ಈ ನಡುವೆ ಕರೋನ ತಡೆಗೆ ಹಲವು ಕಡೆ ಸೀಲ್‍ ಡೌನ್ ಮಾಡಲಾಗಿದೆ.

ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ 500ಕ್ಕೂ ಹೆಚ್ಚು ಸಕ್ರಿಯ ಕರೋನ ಪ್ರಕರಣಗಳಿವೆ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಇನ್ನಿಲ್ಲದ ಕ್ರಮ ಕೈಗೊಳ್ಳಲಾಗುತ್ತಿದೆ.

ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್?

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇದೆ ಕಾರಣಕ್ಕೆ ಕೋಣಂದೂರನ್ನು ಲಾಕ್‍ ಡೌನ್ ಮಾಡಲಾಗಿದೆ.

ಇನ್ನು, ಮುಳುಬಾಗಿಲು ವ್ಯಾಪ್ತಿಯಲ್ಲಿ ಸುಮಾರು 30 ಪ್ರಕರಣಗಳಿವೆ. ಅರೇಹಳ್ಳಿ, ಗುಡ್ಡೇಕೊಪ್ಪ, ಹಾದಿಗಲ್ಲು, ಅರಳಾಪುರ, ಕನ್ನಂಗಿ, ಮೇಲಿನ ಕುರುವಳ್ಳಿ, ಸಾಲ್ಗುಡಿ ವ್ಯಾಪ್ತಿಯಲ್ಲಿ 20ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

COVID NEWS UPDATE 1 1

ಆರಗ, ಅರಳಸುರಳಿ, ಬಸವಾನಿ, ಬೆಜ್ಜವಳ್ಳಿ, ದೇಮ್ಲಾಪುರ, ಹೆದ್ದೂರು, ಹೆಗ್ಗೋಡು, ಹೊಸಹಳ್ಳಿ, ಹುಂಚದಕಟ್ಟೆ, ಮಂಡಗದ್ದೆ, ಮೇಗರವಳ್ಳಿ, ನೆರಟೂರು, ನೊಣಬೂರು, ಸಿಂಗನಬಿದರೆ, ತೀರ್ಥಮತ್ತೂರು, ತ್ರಯಾಂಬಕಪುರ, ತೂದುರು ವ್ಯಾಪ್ತಿಯಲ್ಲಿ 10ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ಆಗುಂಬೆ, ಬಾಂಡ್ಯಾ, ದೇವಂಗಿ, ಹಣಗೆರೆ, ಹಾರೊಗುಳಿಗೆ, ಹೊನ್ನೆತಾಳು, ಕುಡುಮಲ್ಲಿಗೆ, ಮೇಳಿಗೆ, ನಾಲೂರು, ಸಾಲೂರು, ಶೇಡ್ಗಾರು, ಬಿದರಗೋಡು ವ್ಯಾಪ್ತಿಯಲ್ಲಿ 10ಕ್ಕಿಂತಲೂ ಕಡಿಮೆ ಸಕ್ರಿಯ ಪ್ರಕರಣಗಳಿವೆ.

ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment