ಶಂಕರಘಟ್ಟ ಸಮೀಪದ ಗೋಣಿಬೀಡು ಬಳಿ ಕಾಡಾನೆ ಪ್ರತ್ಯಕ್ಷ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 22 JUNE 2021

ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಬಳಿ ಕಾಡಾನೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

ಇವತ್ತು ಬೆಳಗ್ಗೆ ಕಾಡಾನೆ ಪ್ರತ್ಯಕ್ಷವಾಗಿದೆ. ಆನೆಯನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪಟಾಕಿ ಸಿಡಿಸಿ ಅರಣ್ಯಾಧಿಕಾರಿಗಳು ಆನೆಯನ್ನು ಪುನಃ ಕಾಡಿಗೆ ಓಡಿಸಿದ್ದಾರೆ.

ಇದನ್ನೂ ಓದಿ | ಅಪರೇಷನ್ ಮುಗಿದು ವಾರ ಕಳೆಯೋದರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ತೋಟಗಳಿಗೆ ದಾಳಿ

ವನ್ಯಜೀವಿಗಳು ಕಾಡಿನಿಂದ ಹೊರಗೆ ಬಾರದಂತೆ ಟ್ರೆಂಚ್ ಹೊಡೆಯಲಾಗಿದೆ. ಟ್ರೆಂಚ್‍ ಬಳಿಯಲ್ಲೇ ಇದ್ದ ಕಾಡಾನೆ, ಪಟಾಕಿ ಸದ್ದಿಗೆ ಹೆದರಿ ಹಿಂದಕ್ಕೆ ಹೋಗಿದೆ. ಈ ಭಾಗದಲ್ಲಿ ಹುಲಿ, ಚಿರತೆಗಳು ಆಗಾಗ ಕಾಣಸುತ್ತವೆ. ಆದರೆ ಇದೆ ಮೊದಲ ಬಾರಿಗೆ ಕಾಡಾನೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಆನೆ ಜೊತೆಗೆ ಮರಿ ಇತ್ತು ಎಂದು ಹೇಳಲಾಗುತ್ತಿದೆ.

Nammur News For Website 2 1 1 1

ಉಂಬ್ಳೆಬೈಲು ವಲಯದ ಅರಣ್ಯದಲ್ಲಿರುವ ಆನೆಗಳೆ ಗೋಣಿಬೀಡು ಬಳಿ ಪ್ರತ್ಯಕ್ಷವಾಗಿವೆ. ನಾಲ್ಕು ಆನೆಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಕೆಲವು ತಿಂಗಳ ಹಿಂದೆ ಇದೆ ಆನೆಗಳು ಲಕ್ಕಿನಕೊಪ್ಪ ಬಳಿ ಪ್ರತ್ಯಕ್ಷವಾಗಿದ್ದವು. ತೋಟ, ಗದ್ದೆಯಲ್ಲಿ ಓಡಾಡಿದ್ದವು. ಇವುಗಳನ್ನು ಭದ್ರಾ ಅಭಯಾರಣ್ಯದೊಳಗೆ ಓಡಿಸಲು ಸಕ್ರೆಬೈಲು ಬಿಡಾರದ ಆನೆಗಳನ್ನು ಕರೆತಂದು ಕಾರ್ಯಾಚರಣೆ ನಡೆಸಲಾಗಿತ್ತು.

201421733 1138954733251102 9013304741762151542 n.jpg? nc cat=110&ccb=1 3& nc sid=8bfeb9& nc ohc=9tJivDm38zIAX W2r9 & nc ht=scontent.fblr20 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment