ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಸೆಪ್ಟಂಬರ್ 2020
ಶಿವಮೊಗ್ಗ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ತಗ್ಗು ಪ್ರದೇಶ ಮತ್ತು ರಾಜ ಕಾಲುವೆ ಸಮೀಪದಲ್ಲಿ ವಾಸಿಸುತ್ತಿರುವವರಿಗೆ ಆತಂಕ ಶುರುವಾಗಿದೆ.
ಜೋರು ಮಳೆಯಾದರೆ ನಗರದ ತಗ್ಗು ಪ್ರದೇಶಗಳು ಮತ್ತು ರಾಜ ಕಾಲುವೆ ಸಮೀಪದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಕೆಲವು ಕಡೆ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದಂತೆ ರಸ್ತೆಗಳ ಮೇಲೆ ನೀರು ನಿಂತಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ಹಳದಿ ಅಲರ್ಟ್
ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
24 ಗಂಟೆಯಲ್ಲಿ 79 ಮಿ.ಮೀ ಮಳೆ
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 79.20 ಮಿಮಿ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 18.60 ಮಿಮಿ., ಭದ್ರಾವತಿ 26.20 ಮಿಮಿ., ತೀರ್ಥಹಳ್ಳಿ 0.00 ಮಿಮಿ., ಸಾಗರ 02.80 ಮಿಮಿ., ಶಿಕಾರಿಪುರ 20.00 ಮಿಮಿ., ಸೊರಬ 9.40 ಮಿಮಿ. ಹಾಗೂ ಹೊಸನಗರ 2.20 ಮಿಮಿ. ಮಳೆಯಾಗಿದೆ.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]