ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020
ಮ್ಯಾಕ್ಸ್ ಆಸ್ಪತ್ರೆ ಬಳಿ ದೊರೆತೆ ಹತ್ತು ಸಾವಿರ ರೂಪಾಯಿ ಹಣವನ್ನು ವಾರಸುದಾರರಿಗೆ ಒಪ್ಪಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಣ ಯಾರಿಗೆ ಸೇರಿದ್ದು?
ಹತ್ತು ಸಾವಿರ ರುಪಾಯಿ ಹಣವು ತೀರ್ಥಹಳ್ಳಿ ತಾಲೂಕು ಬಾಳೆಹಿತ್ಲು ಗ್ರಾಮದ ಉದಯ್ ಕುಮಾರ್ ಎಂಬುವವರಿಗೆ ಸೇರಿದೆ. ಇದನ್ನು ಖಚಿತಪಡಿಸಿಕೊಂಡ ಪೊಲೀಸರು, ಉದಯ್ ಕುಮಾರ್ ಅವರಿಗೆ ಇವತ್ತು ಹಣ ಹಿಂತಿರುಗಿಸಿದ್ದಾರೆ.
ಹಣ ಕಳೆದುಕೊಂಡಿದ್ದು ಹೇಗೆ?
ಉದಯ್ ಕುಮಾರ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಚಿಕಿತ್ಸೆ ಸಲುವಾಗಿ ಆಗಾಗ ಮ್ಯಾಕ್ಸ್ ಆಸ್ಪತ್ರೆಗೆ ಬರುತ್ತಿದ್ದರು. ಬುಧವಾರ ಚಿಕಿತ್ಸೆಗೆ ಬಂದಿದ್ದ ಉದಯ್ ಕುಮಾರ್ ಅವರು ರಕ್ತ ಪರೀಕ್ಷೆ ಮಾಡಿಸಿಕೊಂಡಿದ್ದರು. ನಂತರ ಹೃದಯ ಸಂಬಂಧಿ ಸ್ಕ್ಯಾನಿಂಗ್ ಮಾಡಿಸಬೇಕಿತ್ತು. ಇದಕ್ಕೆ ಸಮಯವಿದ್ದಿದ್ದರಿಂದ ಪಕ್ಕದ ಹೊಟೇಲ್’ನಲ್ಲಿ ಕಾಫಿ ಕುಡಿಯಲು ತೆರಳಿದ್ದರು. ಈ ವೇಳೆ ಜೇಬಿನಲ್ಲಿದ್ದ ಹಣ ಬೀಳಿಸಿಕೊಂಡಿದ್ದರು.
ಉದಯ್ ಅವರ ಹಣ ಅಂತಾ ಖಚಿತವಾಗಿದ್ದು ಹೇಗೆ?
ಮ್ಯಾಕ್ಸ್ ಆಸ್ಪತ್ರೆ ಮುಂಭಾಗ ರಸ್ತೆಯಲ್ಲಿ ಬಿದ್ದಿದ್ದ ಹಣ ಶಿಕ್ಷಕರೊಬ್ಬರಿಗೆ ಸಿಕ್ಕಿತ್ತು. ಶಿಕ್ಷಕ ಶರಣಪ್ಪ ಅವರು ಹಣವನ್ನು ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಚಂದನ್ ನಾಯ್ಕ್ ಅವರಿಗೆ ಒಪ್ಪಿಸಿದ್ದರು. ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ.
ಹಣ ಯಾರಿಗೆ ಸೇರಿದ್ದು ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ನಡುವೆ ಹಣ ಕಳೆದುಕೊಂಡಿದ್ದ ಉದಯ್ ಕುಮಾರ್ ಅವರು ಮ್ಯಾಕ್ಸ್ ಆಸ್ಪತ್ರೆ ಸಿಬ್ಬಂದಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು. ಅಲ್ಲದೆ ಹಣ ಸಿಕ್ಕರೆ ಹಿಂತಿರುಗಿಸಿ ಎಂದು ಮೊಬೈಲ್ ನಂಬರ್ ನೀಡಿದ್ದರು. ಇದಿಷ್ಟೆ ಅಲ್ಲದೆ, ಸಮೀಪದ ಮೆಡಿಕಲ್ ಶಾಪ್’ನಲ್ಲೂ ಹಣ ಕಳೆದುಕೊಂಡಿರವ ಕುರಿತು ತಿಳಿಸಿ ಹೋಗಿದ್ದರು. ಹಣ ಪತ್ತೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಮ್ಯಾಕ್ಸ್ ಆಸ್ಪತ್ರೆ ಸಿಬ್ಬಂದಿ, ಉದಯ್ ಕುಮಾರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.
ಠಾಣೆಗೆ ಬಂದರು ಹಣದ ವಾರಸುದಾರ
ಹತ್ತು ಸಾವಿರ ರುಪಾಯಿ ಹಣ ಪೊಲೀಸರ ಬಳಿ ಸೇಫಾಗಿರುವ ವಿಚಾರ ತಿಳಿಯುತ್ತಿದ್ದಂತೆ, ಉದಯ್ ಕುಮಾರ್ ಅವರು ಜಯನಗರ ಪೊಲೀಸ್ ಠಾಣೆಗೆ ಬಂದರು. ಈ ವೇಳೆ ಹಣ ಕಳೆದುಕೊಂಡಿದ್ದು ಹೇಗೆ ಎಂಬುದನ್ನು ಪ್ರಶ್ನಿಸಿದ ಪೊಲೀಸರು, ಮ್ಯಾಕ್ಸ್ ಆಸ್ಪತ್ರೆ, ಮೆಡಿಕಲ್ ಶಾಪ್ ಮಾಲೀಕರನ್ನು ವಿಚಾರಸಿದರು. ಕೂಲಂಕಷ ಪರಿಶೀಲನೆ ಬಳಿಕ ಉದಯ್ ಕುಮಾರ್ ಅವರಿಗೆ ಹಣ ಹಿಂತಿರುಗಿಸಿದರು.
ಜಯನಗರ ಠಾಣೆಯ ಪೊಲೀಸರ ಕಾರ್ಯ ಜನ ಮೆಚ್ಚುಗೆ ಗಳಿಸಿದೆ. ಶಿಕ್ಷಕ ಶರಣಪ್ಪ ಅವರ ಪ್ರಾಮಾಣಿಕತೆ, ಪೊಲೀಸರು ಕರ್ತವ್ಯ ಪ್ರಜ್ಞೆಯಿಂದಾಗಿ ಉದಯ್ ಕುಮಾರ್ ಅವರು ಕಳೆದುಕೊಂಡಿದ್ದ ಹಣ, ಅವರಿಗೆ ಹಿಂತಿರುಗಿದಂತಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]