ಆಘಾತಕಾರಿ ಸಂಗತಿ, ಶಿವಮೊಗ್ಗ ಜಿಲ್ಲೆಯಾದ್ಯಂತ 30 ದಿನದಲ್ಲಿ 29 ಮಂದಿ ರಸ್ತೆ ಅಪಘಾತದಲ್ಲಿ ಸಾವು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020

ಜಿಲ್ಲೆಯಲ್ಲಿ ಕಳೆದ 30 ದಿನಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿಬರೋಬ್ಬರಿ 29 ಮೃತಪಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಹೆಲ್ಮಟ್ ಧರಿಸದ ಪ್ರಕರಣಗಳಾಗಿವೆ. ಇಂತಹ ಆಘಾತಕಾರಿ ಮಾಹಿತಿಯನ್ನು ಎಸ್ಪಿ ಕೆ.ಎಂ.ಶಾಂತರಾಜು ಬಹಿರಂಗ ಪಡಿಸಿದ್ದಾರೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ನಗರದ ಡಿಎಆರ್ ಸಭಾಂಗಣದಲ್ಲಿ ಎಸ್ಸಿ ಮತ್ತು ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಹೆಲ್ಮಟ್ ಧರಿಸದ ಸಾರ್ವಜನಿಕರ ರಕ್ಷಣೆಗೆ ಹೆಲ್ಮೆಟ್ ಪಕರಣ ಕಡ್ಡಾಯಗೊಳಿಸಲಾಗಿದೆ. ಕಳೆದೊಂದು ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ 29 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಶೇ.60ಕ್ಕಿಂತ ಹೆಚ್ಚಿನ ಪ್ರಕರಣಗಳು ಹೆಲ್ಮೆಟ್ ಧರಿಸದ ಪ್ರಕರಣಗಳಾಗಿವೆ ಎಂದರು.

BH Road Shivappanayaka Statue 1

ಸರ್ಕಾರಕ್ಕೆ ಶ್ರೀಮಂತಿಕೆ ಬರುವುದಿಲ್ಲ

ಹೆಲೈಟ್ ಧರಿಸದ ಸವಾರರಿಗೆ 500 ರೂ. ದಂಡ ಹಾಕುವುದರಿಂದ ಸರ್ಕಾರಕ್ಕೆ ಶ್ರೀಮಂತಿಕೆ ಬರಲ್ಲ, ಅದೇ ಇನ್ನೂ 500 ರೂ. ಸೇರಿಸಿ ಒಳ್ಳೆಯ ಹೆಲೈಟ್‌ ತೆಗೆದುಕೊಂಡರೆ ಜೀವ ಉಳಿಯುತ್ತದೆ. ದುಡಿಯುವವರ ಜೀವ ಹೋದರೆ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತದೆ. ಈ ಬಗ್ಗೆ ಎಚ್ಚರವಹಿಸಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದರು.

ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದವರನ್ನು ಹಿಡಿಯುವಾಗ ಜಾತಿ ಗುರುತಿಸುತ್ತಾರೆ ಎಂದು ಡಿಎಸ್‌ಎಸ್ ಕಾರ್ಯಕರ್ತ ಮಂಜುನಾಥ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, ಪೊಲೀಸರು ಹಿಲ್ಮೆಟ್ ಇಲ್ಲದವರಿಗೆ ದಂಡ ಹಾಕುತ್ತಾರೆ. ಖಾಕಿ ಧರಿಸಿದ ಮೇಲೆ ಎಲ್ಲ ಸಾರ್ವಜನಿಕರು ಒಂದೇ. ಅಲ್ಲಿ ಜಾತಿ ಗುರುತಿಸುತ್ತಾರೆ ಎಂಬುದರಲ್ಲಿ ಹುರುಳಿಲ್ಲ ಎಂದರು.

ಡಿವೈಎಸ್ಪಿ ಉಮೇಶ್ ನಾಯ್, ಸಿಪಿಐ ವಸಂತಕುಮಾರ್ ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Comment