ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 7 ಏಪ್ರಿಲ್ 2020
ಲಾಕ್’ಡೌನ್ ವೇಳೆ ನಕಲಿ ಪಾಸ್ ಬಳಸಿಕೊಂಡು ಕಳ್ಳದಂಧೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಾಹನಗಳ ಮೇಲೆ ನಕಲಿ ಪಾಸ್ ಅಂಟಿಸಿಕೊಂಡು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೂಟೆಗಟ್ಟಲೆ ಅಕ್ಕಿ ವಶಕ್ಕೆ
ಶಿವಮೊಗ್ಗದ ಕಲ್ಲೂರು ಮಂಡ್ಲಿಯ ಗೋಡೋನ್ ಮೇಲೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅನ್ನಭಾಗ್ಯ ಯೋಜನೆಯ ಸುಮಾರು 300 ಚೀಲ ಅಕ್ಕಿ ಪತ್ತೆಯಾಗಿದೆ. ಎರಡು ಕಡೆ ಅಕ್ಕಿಯನ್ನು ಇರಿಸಿರುವುದು ಪತ್ತೆಯಾಗಿದೆ.
ನಕಲಿ ಪಾಸ್ ಅಂಟಿಸಿಕೊಂಡಿದ್ದ ಖದೀಮರು
ಲಾಕ್’ಡೌನ್ ವೇಳೆ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ಹೆಚ್ಚಿದೆ. ಈ ಹಿನ್ನೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಿಸಲು ಸುಲಭವಾಗಲಿ ಅಂತಾ ನಕಲಿ ಪಾಸ್’ಗಳನ್ನು ಬಳಸಿಕೊಳ್ಳಲಾಗಿತ್ತು. ಲಾರಿ, ಗೂಡ್ಸ್ ವಾಹನಗಳ ಮೇಲೆ ಎಸೆನ್ಷಿಯಲ್ ಸರ್ವಿಸ್ ಎಂದು ಪಾಸ್ ಅಂಟಿಸಿಕೊಂಡು, ಅಕ್ಕಿಯನ್ನು ಸಾಗಿಸಲಾಗುತ್ತಿತ್ತು.
ಬೇರೆ ಬ್ರಾಂಡ್’ನಲ್ಲಿ ಅಕ್ಕಿ ಮಾರಾಟ
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬೇರೆ ಬ್ರಾಂಡ್’ನಲ್ಲಿ ಮಾರಾಟ ಮಾಡುತ್ತಿದ್ದರು ಅನ್ನುವುದು ದಾಳಿ ವೇಳೆ ತಿಳಿದು ಬಂದಿದೆ. ಇನ್ನು, ದಾಳಿ ವೇಳೆ ಸುಮಾರು 300 ಚೀಲ ಅನ್ನಭಾಗ್ಯ ಯೋಜನೆಯ ಅಕ್ಕಿ, ಒಂದು ಲಾರಿ, ಒಂದು ಪಿಕಪ್ ವಾಹನ, ಮೂರು ಓಮ್ನಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ನಾಗೇಂದ್ರ ಹೊನ್ನಾಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422