ಶಿವಮೊಗ್ಗ ಲೈವ್.ಕಾಂ | SHIMOGA | 12 ಏಪ್ರಿಲ್ 2020
ವಾಟ್ಸಪ್ ಮೆಸೇಜ್ಗೆ ಸ್ಪಂದಿಸಿದ ಶಿವಮೊಗ್ಗ ಪೊಲೀಸರು ವೃದ್ಧ ದಂಪತಿಗೆ ನೆರವು ನೀಡಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ದಿನಸಿ ಮತ್ತು ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಕ್ವಾರ್ಟರ್ಸ್ನಲ್ಲಿ ದಂಪತಿ ವಾಸವಾಗಿದ್ದಾರೆ. ಸಂಬಂಧಿಯೊಬ್ಬರು ತೀರಿಕೊಂಡಿರುವ ಹಿನ್ನೆಲೆ, ಕುಟುಂಬದವರು ತಮಿಳುನಾಡಿಗೆ ಹೋಗಿದ್ದು, ಲಾಕ್ಡೌನ್ ಹಿನ್ನೆಲೆ ಹಿಂತಿರುಗಲು ಆಗಿಲ್ಲ. ಇತ್ತ ವೃದ್ಧ ದಂಪತಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸಾದ್ಯವಾಗಿಲ್ಲ.
ವಾಟ್ಸಪ್ ಮೆಸೇಜ್ಗೆ ಸ್ಪಂದಿಸಿದ ಪೊಲೀಸ್
ವೃದ್ಧ ದಂಪತಿ ಪರಿಸ್ಥಿತಿ ಕುರಿತು ವಾಟ್ಸಪ್ನಲ್ಲಿ ಮೆಸೇಜ್ ಬಂದಿತ್ತು. ಇದನ್ನು ಗಮನಿಸಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ವೃದ್ಧ ದಂಪತಿಗೆ ನೆರವು ನೀಡುವಂತೆ ಸೂಚಿಸಿದ್ದರು. ಅದರಂತೆ ದಂಪತಿ ಮನೆಗೆ ತೆರಳಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ಸುರೇಶ್ ಮತ್ತು ಸಿಬ್ಬಂದಿ ಒಂದು ತಿಂಗಳಿಗೆ ಆಗುವಷ್ಟು ದಿನಸಿ ನೀಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]