ಶಿವಮೊಗ್ಗ ಲೈವ್.ಕಾಂ | SAGARA | 21 ಏಪ್ರಿಲ್ 2020
ಲಾಕ್ಡೌನ್ ನೆಪದಲ್ಲಿ ರೈತರಿಗೆ ತೊಂದರೆ ಆಗಬಾರದು. ರೈತರು ಬೆಳೆದ ಬೆಳೆಯನ್ನು ಪಟ್ಟಣದಲ್ಲಿ ಮಾರಾಟಕ್ಕೆ ತಾಲೂಕು ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡಲಾಗುತ್ತೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಅಭಯ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಹಾಲಪ್ಪ, ಸಾಗರ ನ್ಯಾಯಾಲಯದ ಎದುರಿನ ಒಂದು ಭಾಗ, ಜೋಗ ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ ಮುಂಭಾಗದ ಚಾಮರಾಜಪೇಟೆ ರಸ್ತೆ, ಹಳ್ಳಿಗಳಿಂದ ನಗರಕ್ಕೆ ಬರುವ ಪ್ರಮುಖ ಸರ್ಕಲ್ಗಳಲ್ಲಿ ರೈತರು ಬೆಳೆ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ವಾರ ಪೂರ್ತಿ ಮಾರಾಟಕ್ಕೆ ಅನುಮತಿ
ರೈತರು ವಾರ ಪೂರ್ತಿ ಬೆಳೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾರಾಟ ಮಾಡಬಹುದು. ಉಳಿದಂತೆ ಪ್ರತಿ ಬಡಾವಣೆಯಲ್ಲೂ ತರಕಾರಿ ಮಾರಾಟ ಎಂದಿನಂತೆ ಇರಲಿದೆ ಅಂತಾ ಶಾಸಕ ಹಾಲಪ್ಪ ತಿಳಿಸಿದರು.
ಅಂತರ ಉಲ್ಲಂಘಿಸಿದರೆ ಶಾಶ್ವತ ಸೀಲ್
ಪಟ್ಟಣದ ಕೆಲವು ಕಡೆ ವ್ಯಾಪಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಈ ನಿಯಮ ಉಲ್ಲಂಘಿಸುವ ಅಂಡಿಗಳನ್ನು ಬಂದ್ ಮಾಡಿ, ಶಾಶ್ವತವಾಗಿ ಸೀಲ್ ಮಾಡಲಾಗುತ್ತದೆ ಎಂದು ಡಾ. ಎಲ್.ನಾಗರಾಜ್ ಎಚ್ಚರಿಸಿದರು.
ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಡಿವೈಎಸ್ಪಿ ವಿನಾಯಕ್ ಶೆಟ್ಟಿಗಾರ್, ಪೌರಾಯುಕ್ತ ನಾಗಪ್ಪ, ಟಿಹೆಚ್ಒ ಡಾ.ಕೆ.ಎಸ್.ಮೋಹನ್, ತಾಲೂಕು ಪಂಚಾಯಿತಿ ಇಒ ಪುಷ್ಪಾ ಕಮ್ಮಾರ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]