ಡಿಸಿ ಹೇಳಿದ್ದೊಂದು, ಪೊಲೀಸರು ಮಾಡಿದ್ದೊಂದು, ಶಿವಮೊಗ್ಗದಲ್ಲಿ ಲಾಕ್‌ಡೌನ್‌ ಗೊಂದಲವೋ ಗೊಂದಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 25 ಏಪ್ರಿಲ್ 2020

ಲಾಕ್‌ಡೌನ್‌ ಸಂಬಂಧ ಶಿವಮೊಗ್ಗದಲ್ಲಿ ಜನರು ಮತ್ತು ವ್ಯಾಪಾರಿಗಳ ನಡುವೆ ಗೊಂದಲ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಿಭಿನ್ನ ಆದೇಶ ಹೊರಡಿಸುತ್ತಿರುವುದೆ ಗೊಂದಲಕ್ಕೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಏನಾಗುತ್ತಿದೆ?

ಶಿವಮೊಗ್ಗದಲ್ಲಿ ಕರೋನ ಪಾಸಿಟಿವ್‌ ಕೇಸುಗಳಿಲ್ಲ. ಹಾಗಾಗಿ ಜಿಲ್ಲೆ ಗ್ರೀನ್‌ ಜೋನ್‌ನಲ್ಲಿದೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಹಲವು ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸಂಬಂಧ ಜಿಲ್ಲಾಡಳಿತದ ನಿರ್ಧಾರವೊಂದು, ಪೊಲೀಸರು ನಡೆಯೊಂದು ಆಗಿದೆ. ಇದು ವ್ಯಾಪಾರಿಗಳನ್ನು ಗೊಂದಲಕ್ಕೀಡು ಮಾಡಿದೆ.

94977541 1106210976406988 8647629123910369280 o.jpg? nc cat=101& nc sid=8024bb& nc ohc=HSxmRiMLZl4AX8qI Ru& nc ht=scontent.fblr11 1

ಜಿಲ್ಲಾಡಳಿತ ಹೇಳಿದ್ದೇನು? ಆಗ್ತಿರೋದೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಇಲ್ಲ. ಆದರೂ ಗುರುವಾರದಿಂದ ಹೆಚ್ಚುವರಿಯಾಗಿ ಕೆಲವು ಸೇವೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಜ್ಯೂಸ್‌, ಐಸ್‌ ಕ್ರೀಂ ಅಂಗಡಿ, ಕೃಷಿ ಸಂಬಂಧಿತ ಉತ್ಪನ್ನಗಳು, ಎಲೆಕ್ಟ್ರಿಕಲ್‌, ಹಾರ್ಡ್‌ವೇರ್‌, ತರಕಾರಿ ಮಾರಾಟ ಮಳಿಗೆ ತೆರೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದ್ದಾರೆ. ಅದರಂತೆ ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರು ಬಂದು ಬಾಗಿಲು ಹಾಕಿಸುತ್ತಿದ್ದಾರೆ. ಇವತ್ತು ಬೆಳಗ್ಗೆ 10 ಗಂಟೆಯಿಂದಲೇ ಪೊಲೀಸರು ಅಂಗಡಿಗಳನ್ನು ಬಂದ್‌ ಮಾಡಿಸುತ್ತಿದ್ದಾರೆ. ಇದು ವ್ಯಾಪಾರಿಗಳಲ್ಲಿ ಆಕ್ರೋಶ ಮತ್ತು ಗೊಂದಲ ಸೃಷ್ಟಿಸಿದೆ. ಈ ಸಂಬಂಧ ವಿಡಿಯೋ ರಿಪೋರ್ಟ್‌ ಇಲ್ಲಿದೆ.

ಸ್ಪಷ್ಟತೆ ಕೇಳುತ್ತಿದ್ದಾರೆ ವ್ಯಾಪಾರಿಗಳು

ಗ್ರೀನ್‌ ಜೋನ್ನಲ್ಲಿ ಎಲ್ಲ ವ್ಯಾಪಾರಕ್ಕೆ‌ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಟಿವಿ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದ ವರದಿ ಪ್ರಕಟವಾಗುತ್ತಿದೆ. ಇತ್ತ ಪೊಲೀಸರು ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ. ಮೊಬೈಲ್‌ ರೀಚಾರ್ಜ್‌ ಅಂಗಡಿ ತೆರೆಯಲು ಅವಕಾಶವಿದೆ ಎಂದು ಜಿಲಾಧಿಕಾರಿ ಹೇಳಿದ್ದಾರೆ. ಬೆಳಗ್ಗೆ ಅಂಗಡಿ ತೆಗೆದು ಸ್ವಲ್ಪ ಹೊತ್ತಿಗೆ ಪೊಲೀಸರು ಬಂದು ಅಂಗ ಮುಚ್ಚಿಸಿದ್ದಾರೆ. ಯಾಕೆ ಈ ಗೊಂದಲ? ಎಂದು ಪ್ರಶ್ನಿಸುತ್ತಾರೆ ಭದ್ರಾವತಿಯ ನವೀನ್.‌

94240587 1106211049740314 7959434917660590080 o.jpg? nc cat=102& nc sid=8024bb& nc ohc=JZ4ZjR FJoAAX9wd3vM& nc ht=scontent.fblr11 1

ಅನಗತ್ಯವಾಗಿ ಓಡಾಡಿದರೆ ಕೇಸ್‌

ಈ ಗೊಂದಲದ ಲಾಭ ಪಡೆದುಕೊಂಡು ಕೆಲವರು ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಪ್ರಮುಖ ಸರ್ಕಲ್‌ ಮತ್ತು ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದ್ದು, ವಾಹನಗಳ ತಪಾಸಣೆ ಮುಂದುವರೆದಿದೆ.  

93578388 852483425231569 3444932249521225728 o.jpg? nc cat=105& nc sid=8024bb& nc ohc=SZVPAp1sPCMAX obk8t& nc ht=scontent.fblr1 4
92107209 840687883077790 4340426127509028864 n.jpg? nc cat=103& nc sid=dd9801& nc ohc=nTffco3BFv0AX9cUOmv& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 25, 2020

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

ವಿದ್ಯುತ್‌ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?‌

ವಿದ್ಯುತ್‌ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?‌

Leave a Comment