ಆಯನೂರು ಬಳಿ ಉರುಳಿ ಬಿತ್ತು ನಿರ್ಮಾಣ ಹಂತದ ವಿದ್ಯುತ್ ಟವರ್, ಕಾರ್ಮಿಕರಿಗೆ ಗಾಯ, ಸ್ಥಳದಲ್ಲಿ ಕೆಲಕಾಲ ಆತಂಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020

ನಿರ್ಮಾಣ ಹಂತದ ವಿದ್ಯತ್‌ ಟವರ್‌ ದಿಢೀರ್‌ ಉರುಳಿದ ಬಿದ್ದಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಯನೂರು ಸಮೀಪದ ಹೊಸನಗರ ರಸ್ತೆ ಬಳಿ 220 ಕೆ.ವಿ. ಟವರ್‌ ಲೈನ್‌ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದು ಟವರ್‌ ನಿರ್ಮಾಣ ಮಾಡುತ್ತಿದೆ. ಪಶ್ಚಿಮ  ಬಂಗಾಳ ಮೂಲದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ‌

ದೊಡ್ಡ ಅನಾಹುತ ತಪ್ಪಿಸಿದ ಊಟ

ಬೆಳಗ್ಗೆಯಿಂದಲೇ ಟವರ್‌ ಕೆಲಸ ನಡೆಯುತ್ತಿತ್ತು. ಮಧ್ಯಾಹ್ನ ಊಟದ ವೇಳೆಗೆ ಕೆಲಸ ಮಾಡುತ್ತಿದ್ದವರೆಲ್ಲ ಟವರ್‌ನಿಂದ ಕೆಳಗಿಳಿದು ಅಲ್ಲಿಯೇ ಪಕ್ಕದಲ್ಲಿ ಊಟ ಆರಂಭಿಸಿದ್ದರು. ಇನ್ನಿಬ್ಬರು ಕಾರ್ಮಿಕರು ಟವರ್‌ ಮೇಲೆ ಕೆಲಸ ಮಾಡುತ್ತಿದ್ದರು. ಈ ವೇಳೆಯೆ ಟವರ್‌ ಉರುಳಿದೆ ಎಂದು ತಿಳಿದು ಬಂದಿದೆ.  

94632891 1109221682772584 7635306474704470016 o.jpg? nc cat=100& nc sid=8024bb& nc ohc=YHD8BYNBcyUAX8O 8bd& nc ht=scontent.fblr11 1

ಗಾಯಗೊಂಡು ಅರಚುತ್ತಿದ್ದವರಿಗೆ ಸ್ಥಳೀಯರ ನೆರವು

ಟವರ್‌ ಬಿದ್ದು ಇಬ್ಬರು ಕಾರ್ಮಿಕರು ಗಾಯಗೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನೋವಿನಿಂದ ಅರಚುತ್ತಿದ್ದ ಕಾರ್ಮಿಕರಿಗೆ ಸ್ಥಳೀಯರು ನೆರವಾಗಿದ್ದಾರೆ. ಕೂಡಲೇ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ರಸ್ತೆ ಸಂಚಾರಕ್ಕೆ ಅಡ್ಡಿಯಾದ ವಯರ್‌

ಟವರ್‌ ಬೀಳುತ್ತಿದ್ದಂತೆ 220 ಕೆ.ವಿ.ವಯರ್‌ ಕೂಡ ರಸ್ತೆ ಮೇಲೆ ಬಿದ್ದಿತ್ತು. ಇದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ವಾಹನಗಳು ಸಾಲು ಗಟ್ಟಿ ನಿಂತಿದ್ದವು. ವಯರ್‌ ತೆರವುಗೊಳಿಸಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಉರುಳಿ ಬಿದ್ದ ಟವರ್‌ ಪಕ್ಕದಲ್ಲೆ ಹಳೆಯ ಟವರ್‌ ಇದೆ. ಇದು ಅತ್ಯಂತ ಗಟ್ಟಿಮುಟ್ಟಾಗಿದೆ. ಆದರೆ ಹೊಸ ಟವರ್‌ ನಿರ್ಮಾಣ ಹಂತದಲ್ಲೇ ಉರುಳಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

92107209 840687883077790 4340426127509028864 n.jpg? nc cat=103& nc sid=dd9801& nc ohc=nTffco3BFv0AX9cUOmv& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment