ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020
ಮಹಾನಗರ ಪಾಲಿಕೆ ವತಿಯಿಂದ ಮೆಗ್ಗಾನ್ ಆಸ್ಪತ್ರೆಗೆ ನೀಡಲಾಗಿದ್ದ ಸ್ವ್ಯಾಬ್ ಬೂತ್ ಪೀಸ್ ಪೀಸ್ ಆಗಿದೆ. ಕೆಲವೇ ದಿನದಲ್ಲಿ ಬೂತ್ ಈ ಸ್ಥಿತಿಗೆ ತಲುಪಿದ್ದಕ್ಕೆ ಪಾಲಿಕೆಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಗೆ ಬರುವವರ ಗಂಟಲು ದ್ರವ ಮಾದರಿ ಸಂಗ್ರಹಿಸಲು ಅನುಕೂಲವಾಗಲಿ ಎಂದು ಸ್ವ್ಯಾಬ್ ಬೂತ್ ನೀಡಲಾಗಿತ್ತು. ಒಂದು ಸ್ವ್ಯಾಬ್ ಬೂತ್ಗೆ 25 ಸಾವಿರ ರೂ. ಖರ್ಚಾಗಿದೆ. ಮೆಗ್ಗಾನ್ ಆಸ್ಪತ್ರೆ ಕರೋನ ಕಟ್ಟಡದ ಮುಂಭಾಗದಲ್ಲಿ ಈ ಬೂತ್ ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಸುರಿದ ಮಳೆ, ಭಾರಿ ಗಾಳಿಗೆ ಸ್ವ್ಯಾಬ್ ಬೂತ್ ಉರುಳಿ ಬಿದ್ದು, ಗ್ಲಾಸ್ ಪುಡಿಪುಡಿಯಾಗಿದೆ. ಬೂತ್ ಪೀಸ್ ಪೀಸ್ ಆಗಿದೆ.

ಬೂತ್ ಸ್ಥಿತಿ ಕಂಡು ಹೌಹಾರಿದ ಸದಸ್ಯರು
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್ ನೇತೃತ್ವದಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕರೋನ ಪರಿಸ್ಥಿತಿ, ಸಿಬ್ಬಂದಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಸ್ವ್ಯಾಬ್ ಬೂತ್ ಕಂಡು ಹೌಹಾರಿದರು. ಬೂತ್ ಈ ಸ್ಥಿತಿಗೆ ತಲುಪಿ ಐದಾರು ದಿನವಾದರು ಅದರ ದುರಸ್ಥಿತಗೆ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಆಸ್ಪತ್ರೆಯಲ್ಲಿ 180 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕರೋನ ವಿರುದ್ಧ ನೀಡುವ ಉಪಕರಣಗಳನ್ನು ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಬಾರಿ ಇಲ್ಲಿ ಬಂದು ಸಭೆ ನಡೆಸಿ ತೆರಳುತ್ತಾರೆ. ಆದರೆ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಹೆಚ್.ಸಿ.ಯೋಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

About The Editor
ನಿತಿನ್ ಆರ್.ಕೈದೊಟ್ಲು






