ಶಿವಮೊಗ್ಗದ ಕೆಲವೆಡೆ ಡೆಮೊ ಸೀಲ್‌ಡೌನ್‌, ಊಹಾಪೋಹಕ್ಕೆ ಜನ ಗಢಗಢ, ಏನಿದು ಡೆಮೊ? ಇದನ್ನ ಮಾಡಿದ್ದೇಕೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ
shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 7 ಮೇ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ ನಗರದ ಕೆಲವು ಕಡೆ ಪೊಲೀಸರು ದಿಢೀರ್ ಸೀಲ್‍ಡೌನ್ ಮಾಡಿದ್ದಾರೆ. ಸಂಜೆ ವೇಳೆಗೆ ಕೆಲವು ಏರಿಯಾಗಳನ್ನು ಸೀಲ್‍ಡೌನ್ ಮಾಡಿದ್ದರಿಂದ ಜನರು ಭೀತಿಗೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹದ ಸುದ್ದಿಗಳು ಹರಿದಾಡಿವೆ. ಆದರೆ ಪೊಲೀಸರು ಇದನ್ನ ‘ಡೆಮೊ ಸೀಲ್‍ ಡೌನ್’ ಎಂದು ಬಣ್ಣಿಸಿದ್ದಾರೆ.

ಎಲ್ಲೆಲ್ಲಿ ಡೆಮೊ ಸೀಲ್‍ ಡೌನ್ ಮಾಡಲಾಗಿದೆ?

ನಗರದ ಸೀಗೆಹಟ್ಟಿ, ಭಾರತಿ‌ ಕಾಲೋನಿ, ಸಿದ್ದಯ್ಯ ರಸ್ತೆ, ಆರ್.ಎಂ.ಎಲ್ ನಗರದಲ್ಲಿಸೀಲ್‍ಡೌನ್ ಮಾಡಲಾಗಿದೆ. ಸಂಜೆ ವೇಳೆಗೆ ಈ ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ವಾಹನಗಳ ಓಡಾಟ, ಜನ ಸಂಚಾರಕ್ಕೂ ನಿರ್ಬಂಧ ವಿಧಿಸಲಾಯಿತು. ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕ ಮೂಡಿಸಿತು.

95842060 1115198978841521 8193357738751819776 n.jpg? nc cat=111& nc sid=110474& nc ohc=jHXudmxNAFcAX8VsVJE& nc ht=scontent.fblr1 4

ಪೊಲೀಸ್ ಇಲಾಖೆ ಏನು ಹೇಳ್ತಿದೆ?

ನಗರದ ಕೆಲವು ಬಡಾವಣೆಯಲ್ಲಿ ದಿಢೀರ್ ಸೀಲ್‍ಡೌನ್ ಮಾಡಿರುವುದನ್ನು ಪೊಲೀಸರು ‘ಡೆಮೊ ಸೀಲ್‍ಡೌನ್’ ಎಂದು ಬಣ್ಣಿಸಿದ್ದಾರೆ. ಇದು ಅಣಕು ಸೀಲ್‍ಡೌನ್. ಒಂದು ವೇಳೆ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾದರೆ ಬಡಾವಣೆಗಳನ್ನು ಯಾವ ರೀತಿ ಸೀಲ್‍ಡೌನ್ ಮಾಡಬೇಕು ಎಂಬುದನ್ನು ಅರಿಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನರು ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

95617323 1115199105508175 8330596731431419904 n.jpg? nc cat=102& nc sid=110474& nc ohc=2d cB4Yd RkAX ixoVr& nc ht=scontent.fblr1 3

‘ಶಿವಮೊಗ್ಗದಲ್ಲಿ ಪ್ರತಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಸೀಲ್‍ ಡೌನ್ ಇರಲಿದೆ. ಇದರ ಹೊರತು ಹೊಸತೇನು ಇಲ್ಲ. ಯಾವುದೇ ಅತಂಕ ಬೇಡ’

ಕೆ.ಎಂ.ಶಾಂತರಾಜು , ಜಿಲ್ಲಾ ರಕ್ಷಣಾಧಿಕಾರಿ

ವಾಟ್ಸಪ್‍, ಫೇಸ್‍ಬುಕ್‍ನಲ್ಲಿ ಊಹಾಪೋಹ

ಅಣಕು ಸೀಲ್‍ಡೌನ್ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಇತ್ತ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

96239559 1115199205508165 2205754405607702528 n.jpg? nc cat=106& nc sid=110474& nc ohc=Dj7FElxW1scAX mfK3Z& nc ht=scontent.fblr1 3

ಶಿವಮೊಗ್ಗದಲ್ಲಿ ಎಲ್ಲವು ನೆಗೆಟಿವ್

ಜಿಲ್ಲೆಯಾದ್ಯಂತ ಈತನಕ 2235 ಮಂದಿ ಕರೋನ ಟೆಸ್ಟ್‍ಗೆ ಒಳಗಾಗಿದ್ದಾರೆ. ಮೇ 7ರಂದು ಸಂಜೆ 5.50ರವರೆಗಿನ ರಿಪೋರ್ಟ್ ಪ್ರಕಾರ, 2125 ಮಂದಿಯ ರಿಪೋರ್ಟ್ ನೆಗೆಟಿವ್ ಬಂದಿದೆ. ಮೇ 7ರಂದು 139 ಮಂದಿ ಪರೀಕ್ಷೆಗೆ ಒಳಗಾಗಿದ್ದು, 110 ಮಂದಿಯ ರಿಪೋರ್ಟ್ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ವರದಿಯಲ್ಲಿ ತಿಳಿಸಿದೆ.

95219354 1115199268841492 6107963374933377024 n.jpg? nc cat=107& nc sid=110474& nc ohc=Id a6VVV3rQAX V5Pbb& nc ht=scontent.fblr1 3
95132241 857973851349193 1704349070090305536 n.jpg? nc cat=109& nc sid=dd9801& nc ohc=P I5w 5gfgcAX 79J3x& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment