ಹೊರ ರಾಜ್ಯದಿಂದ ಶಿವಮೊಗ್ಗಕ್ಕೆ ಮತ್ತೆ ಬರ್ತಾರೆ ಜನ, ಬಹುತೇಕರಿಗೆ ಸಿಕ್ಕಿದೆ ಅನುಮತಿ, ಎಷ್ಟು ಜನ? ಯಾವಾಗ ಬರ್ತಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಮೇ 2020

ಹೊರ ರಾಜ್ಯದಿಂದ ಶಿವಮೊಗ್ಗಕ್ಕೆ ಆಗಮಿಸಲು ಮತ್ತಷ್ಟು ಮಂದಿ ಈಗ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಬರುವವರನ್ನು ಕೂಡಲೆ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‍ಗೆ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ನಾನಾ ರಾಜ್ಯದಿಂದ ಶಿವಮೊಗ್ಗಕ್ಕೆ 312 ಮಂದಿ ಬರಲು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕರ ಅರ್ಜಿಗಳು ಸ್ವೀಕಾರಗೊಂಡಿವೆ. ಮೇ.28ರಿಂದ ಅನೇಕ ಮಂದಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಗೆ ಬರುತ್ತಿದ್ದಂತೆ ಇವರ ಆರೋಗ್ಯ ಪರೀಕ್ಷೆ ನಡೆಸಿ, ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ.

ಆಪತ್ತು ಆಗದಂತೆ ಕ್ರಮ

ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳ, ರಾಜಸ್ಥಾನದ ರಾಜ್ಯದಿಂದ ಶಿವಮಗ್ಗಕ್ಕೆ ಬಂದವರಿಂದಲೇ ಶಿವಮೊಗ್ಗದಲ್ಲಿ ಪಾಸಿಟಿವ್ ಕೇಸ್‍ಗಳು ಹೆಚ್ಚಳವಾಗಿತ್ತು. ಇದೇ ಕಾರಣಕ್ಕೆ, ಕಳೆದ ಒಂದು ವಾರದಿಂದ ಹೊರ ರಾಜ್ಯದಿಂದ ಬರುವವರಿಗೆ ಒಂದು ಪಾಸ್ ವಿತರಣೆ ಮಾಡಿರಲಿಲ್ಲ. ಈಗ ಪುನಃ ಪಾಸ್ ವಿತರಣೆ ಆರಂಭವಾಗಿದ್ದು, ಕಡ್ಡಾಯ ಪರೀಕ್ಷೆ ಮತ್ತು ಕ್ವಾರಂಟೈನ್‍ ಇರಲಿದೆ. ಹಾಗಾಗಿ ಸಮುದಾಯದ ಹಂತದಲ್ಲಿ ಕರೋನ ಹರಡುವುದನ್ನು ತಡೆಯಲು ಸುಲಭವಾಗಲಿದೆ.

ಶಿವಮೊಗ್ಗಕ್ಕೆ ವಿದೇಶದಿಂದಲೂ ಬಂದಿದ್ದಾರೆ

ಜಿಲ್ಲೆಗೆ ವಿದೇಶದಿಂದಲೂ ಜನರು ಆಗಮಿಸಿದ್ದಾರೆ. ಈತನಕ ಎಂಟು ಮಂದಿ ವಿದೇಶದಿಂದ ಬಂದಿದ್ದಾರೆ. ಇವರನ್ನು ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 28, 2020

Leave a Comment