ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಮೇ 2020
ಶಿವಮೊಗ್ಗದಲ್ಲಿ ಮತ್ತೊಂದು ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಆರು ವರ್ಷದ ಬಾಲಕಿಯೊಬ್ಬಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕು ತಗುಲಿದ್ದು ಹೇಗೆ?
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ಶಿವಮೊಗ್ಗ ಜಿಲ್ಲೆಯ ಬಾಲಕಿಯೊಬ್ಬಳ್ಳಿಗೆ ಸೋಂಕು ತಗುಲಿರುವುದಾಗಿ ತಿಳಿಸಲಾಗಿದೆ.
ಪೇಷೆಂಟ್ ನಂಬರ್ 3194ಗೆ ಕರೋನ ಪಾಸಿಟಿವ್ ಬಂದಿದೆ. ಆದರೆ ಈಕೆಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದು ಇನ್ನು ತಿಳಿದು ಬಂದಿಲ್ಲ. ಹಾಗಾಗಿ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಲಾಗಿದೆ. ಸದ್ಯ ಬಾಲಕಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ
ಪಿ3194 ಕೇಸ್‍ನಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಇವತ್ತು ಕರೋನದಿಂದ ಗುಣಮುಖವಾಗಿ 17 ಜನ ಬಿಡುಗಡೆಯಾಗಿದ್ದಾರೆ. ಈತನಕ 24 ಮಂದಿ ಗುಣಮುಖವಾಗಿ ಮನೆಗೆ ಮರಳಿದ್ದಾರೆ. ಉಳಿದ 18 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com

LATEST NEWS
- ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಏನೇನೆಲ್ಲ ಸ್ಟಾಲ್ಗಳಿವೆ?

- ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? – ಇಂದಿನ ಅಡಿಕೆ ಧಾರಣೆ

- ಹೊಟೇಲ್ ಮಾಲೀಕನಿಂದ ಕೊಲೆ, ಕಾರಿನಲ್ಲಿ ಮೃತದೇಹ ಸಾಗಿಸುವಾಗ ಪೊಲೀಸ್ ಬಲೆಗೆ

- Acting Registrar Appointed for Kuvempu University

About The Editor
ನಿತಿನ್ ಆರ್.ಕೈದೊಟ್ಲು
















