ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜೂನ್ 2020
ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 12 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವಾಗ ಬಂದಿದ್ದು ಇವರು?
ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಇವರನ್ನೆಲ್ಲ ಹೊಟೇಲ್ ಮತ್ತು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಹಾಗಾಗಿ ಮತ್ಯಾರಿಗೂ ಸೋಂಕು ಹರಡಲು ಅವಕಾಶವಾಗಿಲ್ಲ. ಜೂನ್ 3, 4 ಮತ್ತು 5ರಂದು ಈ 12 ಮಂದಿ ಶಿವಮೊಗ್ಗಕ್ಕೆ ಬಂದಿದ್ದರು.
ಯಾವ್ಯಾವ ತಾಲೂಕಿಗೆ ಸೇರಿದವರು?
7 ವರ್ಷದ ಬಾಲಕ ಸೇರಿ 12 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ಐದು ಮಂದಿ ಶಿಕಾರಿಪುರ ತಾಲೂಕಿಗೆ ಸೇರಿದವರು. ನಾಲ್ಕು ಮಂದಿ ಹೊಸನಗರ ತಾಲೂಕು ರಿಪ್ಪನ್‍ಪೇಟೆಯವರು, ಸೊರಬದ ಮೂವರು ಇದ್ದಾರೆ.
ಹೊಟೇಲ್ ಉದ್ಯಮದಲ್ಲಿ ತೊಡಗಿದ್ದರು
ರಿಪ್ಪನ್‍ಪೇಟೆಯ ನಾಲ್ಕು ಮಂದಿ ಒಂದೆ ಕುಟುಂಬದವರು. ಪತಿ, ಪತ್ನಿ, ಮಕ್ಕಳಿಬ್ಬರು ಬಹು ವರ್ಷದಿಂದ ಮುಂಬೈನಲ್ಲಿದ್ದರು. ಹೊಟೇಲ್ ಉದ್ಯಮಿದಲ್ಲಿ ತೊಡಗಿಸಿಕೊಂಡಿದ್ದರು. ಪತ್ನಿಯ ತವರು ಮನೆ ರಿಪ್ಪನ್‍ಪೇಟೆಯಲ್ಲಿದೆ. ಹಾಗಾಗಿ ಅವರು ಪಾಸ್ ಪಡೆದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಅದರೆ ಮುಂಬೈನಿಂದ ಬಂದವರಿಗೆ ಕ್ವಾರಂಟನ್ ಕಡ್ಡಾಯವಾಗಿರುವ ಹಿನ್ನೆಲೆ, ಇವರನ್ನು ಶಿವಮೊಗ್ಗದಲ್ಲಿ ಕ್ವಾರಂಟೈನ್‍ನಲ್ಲಿದ್ದರು.
ಸಂಬಂಧಿಗಳ ಮನೆಗೆ ಹೋಗಿದ್ದರು
ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಆರು ಮಂದಿ ಮುಂಬೈನಿಂದ ಕಾರಿನಲ್ಲಿ ಹಿಂತಿರುಗಿದ್ದರು. ಇವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಈ ಪೈಕಿ ಅಜ್ಜಿ ಮತ್ತು ಮೊಮ್ಮಗಳು ಮುಂಬೈನಲ್ಲಿ ಇರುವ ಸಂಬಂಧಿಯೊಬ್ಬರ ಮನೆಗೆ ಹೊಗಿದ್ದರು. ಲಾಕ್ ಡೌನ್ ಆಗಿದ್ದರಿಂದ ಅಲ್ಲಿಯೇ ಉಳಿದುಕೊಂಡಿದ್ದರು.
ಎರಡು ಪ್ರತ್ಯೇಕ ಕಾರಿನಲ್ಲಿ ಸೊರಬಕ್ಕೆ ಬಂದವರನ್ನು ಹಾಸ್ಟೆಲ್ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಹೊರಗಿನವರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವಿರಲಿಲ್ಲ. ಇದರಿಂದ ಸೊರಬದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]