ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಜೂನ್ 2020
ಬೆಂಗಳೂರಿನ ಪಾದರಾಯನಪುರದಲ್ಲಿ ಹರಡಿದ್ದ ಕರೋನ ಸೋಂಕಿನ ಭೀತಿ ಶಿವಮೊಗ್ಗಕ್ಕೂ ವ್ಯಾಪಿಸಿದೆ. ಅಲ್ಲಿ ಬಂದೋಬಸ್ತ್ ಡ್ಯೂಟಿಗೆ ಹೋಗಿದ್ದವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಮೂವರು ಪೊಲೀಸರಿಗೆ ಈಗ ಕರೋನ ಸೋಂಕು ಕಾಣಿಸಿಕೊಂಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಂಗಳವಾರ ಪ್ರಕಟವಾದ ವರದಿಯಲ್ಲಿ ಪಿ5824, ಪಿ5825 ಮತ್ತು ಪಿ5826ಗೆ ಕರೋನ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಇವರಿಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಇದು ಶಿವಮೊಗ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬಂದೋಬಸ್ತ್‍ಗೆ ತೆರಳಿದ್ದವರ ಪ್ರಾಥಮಿಕ ಸಂಪರ್ಕ
ಬಂದೋಬಸ್ತ್ ಡ್ಯೂಟಿಗಾಗಿ ಶಿವಮೊಗ್ಗ KSRP ಪೊಲೀಸರು ಪಾದರಾಯನಪುರಕ್ಕೆ ತೆರಳಿದ್ದರು. ಇಲ್ಲಿಂದ ಹಿಂತಿರುಗಿದ ಕೆಲವರಿಗೆ ಕರೋನ ಸೋಂಕು ಇರುವುದು ದೃಢವಾಗಿತ್ತು. ಇದೇ ಕಾರಣಕ್ಕೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಮೂವರಿಗೆ ಸೋಂಕು ಕಾಣಿಸಿಕೊಂಡಿದೆ.
ಸಂಪರ್ಕ ಪತ್ತೆ ಸಾಹಸ
ಬೆಂಗಳೂರಿನಿಂದ ಹಿಂತಿರುಗಿದ್ದ ಪೊಲೀಸರೊಂದಿಗೆ ಇತರೆ ಪೊಲೀಸರು ಸಂಪರ್ಕದಲ್ಲಿದ್ದರು. ಹಾಗಾಗಿ ಸೋಂಕು ಯಾರಿಂದ ತಗುಲಿದೆ ಅನ್ನುವು ಪತ್ತೆ ಹಚ್ಚುವುದು ಕಷ್ಟವಾಗಿದೆ. ಸದ್ಯ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]