ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜೂನ್ 2020
ಜಿಲ್ಲೆಯಲ್ಲಿ ಕರೋನ ಸೋಂಕಿತರ ಹೆಚ್ಚಾದಂತೆ ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈಗ ಹತ್ತು ಕಂಟೈನ್ಮೆಂಟ್ ಜೋನ್‍ಗಳನ್ನು ರಚಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲೆಯಲ್ಲಿ ಈಗ ಮೂರು ಹೊಸ ಕಂಟೈನ್ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಮತ್ತೆರಡು ರಚಿಸಲಾಗಿದೆ. ಶಿವಮೊಗ್ಗದ ಕಲ್ಲಗಂಗೂರು ಮತ್ತು ಕುಂಬಾರ ಬೀದಿಯನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಇನ್ನೊಂದೆಡೆ ಭದ್ರಾವತಿಯ ರಂಗಪ್ಪ ಸರ್ಕಲ್ ಪಕ್ಕದ ಚನ್ನಗಿರಿ ರಸ್ತೆಯನ್ನು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ.
ಕಂಟೈನ್ಮೆಂಟ್ ಜೋನ್‍ಗಳಿಗೆ ಡಿಸಿ ಭೇಟಿ
ಹೊಸದಾಗಿ ರಚಿಸಲಾಗಿರುವ ಮೂರು ಕಂಟೈನ್ಮೆಂಟ್ ಜೋನ್‍ಗಳಿಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳ ಜೊತೆಗೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದರು.
ಈವರೆಗೂ ಇದ್ದದ್ದು ಎಷ್ಟು?
ಶಿವಮೊಗ್ಗದ ತುಂಗಾನಗರ, ಡಿಎಆರ್ ಪೊಲೀಸ್ ಕ್ವಾರ್ಟರ್ಸ್‍ನ ಒಂದು ಭಾಗ, ಬಾಳೆಕೊಪ್ಪ ಗ್ರಾಮ, ಸೊರಬದ ಹಳೆ ಸೊರಬ, ತೀರ್ಥಹಳ್ಳಿಯ ಹಳ್ಳಿಬೈಲು, ಶಿಕಾರಿಪುರದ ತರಲಘಟ್ಟ ಸೇರಿದಂತೆ ಈವರೆಗೆ ಎಂಟು ಕಂಟೈನ್ಮೆಂಟ್ ಜೋನ್‍ಗಳಿದ್ದವು.
ಬಾಳೆಕೊಪ್ಪ ಸೀಲ್‍ಡೌನ್ ತೆರವು
ಜಿಲ್ಲೆಯಲ್ಲಿ ಮೊದಲು ಸೀಲ್ ಡೌನ್ ಆಗಿದ್ದ ಬಾಳೆಕೊಪ್ಪ ಗ್ರಾಮದಲ್ಲಿ ಸೀಲ್ ಡೌನ್ ತೆರವು ಮಾಡಲಾಗಿದೆ. ಸೀಲ್ ಡೌನ್ ಬಳಿಕ ಬಾಳೆಕೊಪ್ಪ ಗ್ರಾಮದ 76 ಮನೆ ಜನರ ಸಂಕಷ್ಟಕ್ಕೀಡಾಗಿದ್ದರು. ಈಗ ಸೀಲ್ ಡೌನ್ ತೆರವಾಗುತ್ತಿದ್ದಂತೆ ಜನರು ನಿರಾಳವಾಗಿದ್ದಾರೆ. ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಈಗ ಹತ್ತು ಕಂಟೈನ್ಮೆಂಟ್ ಜೋನ್
ಬಾಳೆಕೊಪ್ಪ ಗ್ರಾಮದಲ್ಲಿ ಸೀಲ್ ಡೌನ್ ತೆರವು ಮಾಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ಈಗ ಹತ್ತು ಕಂಟೈನ್ಮೆಂಟ್ ಜೋನ್‍ಗಳಾಗಿವೆ. ಈ ಜೋನ್‍ಗಳಲ್ಲಿ ನಿರಂತರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸ್ಯಾನಿಟೈಸ್ ಮಾಡಲಾಗುತ್ತಿದೆ. ಕರೋನ ಸೋಂಕು ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]