ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 18 ಜುಲೈ 2020
ತೀರ್ಥಹಳ್ಳಿ ತಾಲೂಕಿನಲ್ಲಿ ದಿನೆ ದಿನೆ ಕಾರೋನ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಶುಕ್ರವಾರ ಜಿಲ್ಲಾಡಳಿತ ಪ್ರಕಟಿಸಿದ ವರದಿಯಲ್ಲಿ ಐವರಿಗೆ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಈ ಪೈಕಿ ಮೂವರಿಗೆ ಬೆಂಗಳೂರಿನ ಸಂಪರ್ಕವಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಸೋಂಕು ತಗುಲಿದೆ?
ಕೆಎಸ್ಆರ್ಟಿಸಿ ಚಾಲಕರು | ಸೋಂಕಿತರ ಪೈಕಿ ಇಬ್ಬರು ಕೆಎಸ್ಆರ್ಟಿಸಿ ಬಸ್ ಚಾಲಕರಾಗಿದ್ದಾರೆ. ಒಬ್ಬರು ಕೋಣಂದೂರು ಮತ್ತು ಇನ್ನೊಬ್ಬರು ಕೋಣಂದೂರು ಸಮೀಪದ ಯೋಗಿಮಳಲಿಯವರು.
ಬೆಂಗಳೂರಿನಿಂದ ಬಂದಿದ್ದ ಮಹಿಳೆ | ಬೆಂಗಳೂರಿನಿಂದ ಬುಕ್ಲಾಪುರ ಗ್ರಾಮದ ಕೆಸರೆಯಲ್ಲಿರುವ ಗಂಡನ ಮನೆಗೆ ಬಂದಿದ್ದ ಮಹಿಳೆಗೆ ಸೋಂಕು ತಗುಲಿತ್ತು. ಈಗ ಆಕೆಯ ಪತಿಗೆ ಸೋಂಕು ದೃಢವಾಗಿದೆ.
ಕಾರ್ಮಿಕರಿಗೆ ಸೋಂಕು | ಆರಗ ಗೇಟ್ನಲ್ಲಿರುವ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಸೋಂಕು ತಗುಲಿದೆ. ಇವರು ಹೊನ್ನಾಳಿಯಿಂದ ಜುಲೈ 13ರಂದು ಇಲ್ಲಿಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]