ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಆಗಸ್ಟ್ 2020
ಶಿವಮೊಗ್ಗದಲ್ಲೂ ಬೆಂಗಳೂರು ಮಾದರಿಯಲ್ಲೇ ಕರೋನ ಸೋಂಕು ಹರಡುತ್ತಿದೆ. ಪಟ್ಟಣ, ಹಳ್ಳಿ ಎಂಬ ಭೇದವಿಲ್ಲದೆ ವ್ಯಾಪಕವಾಗಿದೆ. ಪ್ರತಿ ಬೀದಿಯಲ್ಲೂ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜುಲೈ ತಿಂಗಳಲ್ಲಿ ಕರೋನ ಹರಡಿದ ವೇಗ ಗಮನಿಸಿದರೆ, ಈ ತಿಂಗಳು ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಲಕ್ಷಣ ಗೋಚರಿಸುತ್ತಿದೆ.
ಜುಲೈ ತಿಂಗಳಲ್ಲಿ ಎಷ್ಟಾಯ್ತು ಸೋಂಕು?
ಜುಲೈ ತಿಂಗಳ ಆರಂಭದಲ್ಲಿ ಕರೋನ ಸೋಂಕಿತರ ಸಂಖ್ಯೆ 176 ಇತ್ತು. ಹದಿನೈದು ದಿನದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 644ಕ್ಕೆ ಏರಿಕೆಯಾಗಿತ್ತು. ಜುಲೈ ತಿಂಗಳ ಕೊನೆಯಲ್ಲಿ 1727ಗೆ ಹೆಚ್ಚಳವಾಗಿದೆ. ಇದೊಂದೇ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 1551 ಕೇಸ್ ಪತ್ತೆಯಾಗಿವೆ. ಶಿವಮೊಗ್ಗ, ಭದ್ರಾವತಿ ಮತ್ತು ಶಿಕಾರಿಪುರ ತಾಲೂಕಿನಲ್ಲೆ ಹೆಚ್ಚು ಪ್ರಕರಣಗಳಿವೆ.
ಗುಣವಾಗುವವರ ಸಂಖ್ಯೆಯು ಹೆಚ್ಚಳ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಂತೆಯೇ ಗುಣವಾಗುವವರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಶೇ.50ಕ್ಕಿಂತಲೂ ಹೆಚ್ಚು ಸೋಂಕಿತರು ಗುಣವಾಗಿ, ಮನೆಗೆ ಮರಳುತ್ತಿದ್ದಾರೆ. ಇದು ಸಮಾಧಾನಕರ ಸಂಗತಿಯಾಗಿದೆ. ಆಗಸ್ಟ್ 3ರ ಜಿಲ್ಲಾಡಳಿತದ ವರದಿ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 2094, ಗುಣವಾದವರ ಸಂಖ್ಯೆ 1095 ಇದೆ.
ಸೋಂಕಿತರ ಸಂಖ್ಯೆ ಹೆಚ್ಚಳಕ್ಕೇನು ಕಾರಣ?
ಶಿವಮೊಗ್ಗದಲ್ಲಿ ಮೊದಲ ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಮೇ 10ರಂದು. ಗುಜರಾತ್ ರಾಜ್ಯದ ಅಹಮದಾಬಾದ್ನಿಂದ ಹಿಂತಿರುಗಿದ್ದ ಎಂಟು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆರಂಭದಲ್ಲಿ ವಿರಳವಾಗಿದ್ದ ಪ್ರಕರಣಗಳು ಕೊನೆಗೆ ಪ್ರತಿದಿನ ಸೋಂಕಿತರು ಪತ್ತೆಯಾಗುವಂತಾಯಿತು. ಈಗಂತೂ ಪ್ರತಿದಿನ ಸರಾಸರಿ ನೂರು ಕೇಸ್ ಪತ್ತೆಯಾಗುತ್ತಿದೆ. ‘ಜಿಲ್ಲೆಯಲ್ಲಿ ಕರೋನ ತಪಾಸಣೆ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಇದೇ ಕಾರಣಕ್ಕೆ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮುಂಜಾಗ್ರತಾ ಕ್ರಮ ವಹಿಸಿದರೆ ಸೋಂಕು ತಡೆಯಬಹುದಾಗಿದೆ. ಇಲ್ಲವಾದರೆ ಆಗಸ್ಟ್ ತಿಂಗಳಲ್ಲಿ ಸೋಂಕು ಮತ್ತಷ್ಟು ವೇಗವಾಗಿ ಹರಡುವ ಸಾದ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]