ಸಮಸ್ಯೆ ಬಗೆಹರಿಯದಿದ್ದರೆ ಕಚೇರಿ ಮುಂದೆ ಟೆಂಟ್ ಹಾಕಿ ಧರಣಿ ನಡೆಸುತ್ತೇವೆ, ಶಾಂತಿನಗರ ನಿವಾಸಿಗಳ ಎಚ್ಚರಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಸೆಪ್ಟಂಬರ್ 2020

ಪಿಎಂಎವೈ (ನಗರ) ಯೋಜನೆ ಅಡಿಯಲ್ಲಿ ಕೊಳಚೆ ಪ್ರದೇಶಗಳಲ್ಲಿನಿರ್ಮಾಣವಾಗುತ್ತಿರುವ ಮನೆಗಳು ಕಳಪೆಯಾಗಿವೆ. ಕೂಡಲೇ  ಗುಣಮಟ್ಟದ ಕಾಮಗಾರಿಗೆ ನಡೆಸಬೇಕ ಎಂದು ಒತ್ತಾಯಿಸಿ ಶಾಂತಿನಗರ ನಾಗರಿಕ ಹಕ್ಕು ವೇದಿಕೆ ವತಿಯಿಂದ ವಿದ್ಯಾ ನಗರದಲ್ಲಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಬಾಬ್ತಿನ ವಂತಿಕೆ ಯೊಂದಿಗೆ ಮನೆಗಳ ನಿರ್ಮಾಣವಾಗುತ್ತಿದೆ. ಈ ಕಾಮಗಾರಿಯು ಕಳಪೆಯಾಗಿದೆ. ನಿರ್ಮಾಣ ಹಂತದಲ್ಲಿಯೇ ಕಟ್ಟಡಗಳು ಕುಸಿಯುತ್ತಿವೆ. ಅಲ್ಲದೆ ಫಲಾನುಭವಿಗಳು ಪಕ್ಕಾ ಮನೆಗಳ ನಿರೀಕ್ಷೆಯಲ್ಲಿ ಮನೆಗಳನ್ನು ತೆರವು ಮಾಡಿಕೊಟ್ಟು ವರ್ಷಗಳೇ ಕಳೆದರೂ ಮನೆಗಳು ನಿರ್ಮಾಣ  ಪೂರ್ಣಗೊಂಡಿಲ್ಲ ಎಂದು ದೂರಿದರು.

ಬಡ ಫಲಾನುಭವಿಗಳಿಂದ ಮರಳು, ಇಟ್ಟಿಗೆ, ಸಿಮೆಂಟ್, ಕಬ್ಬಿಣ ಸಾಮಗ್ರಿಗಾಗಿ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿಗೆ ಫಲಾನುಭವಿಗಳು ತಮ್ಮ ಪಾಲಿನ ವಂತಿಕೆಯನ್ನು ಕೆಎಸ್‌ಡಿಬಿಗೆ ಸಂದಾಯ ಮಾಡಿದ್ದರೂ ಸಂಬಂಧಪಟ್ಟ ಇಂಜಿನಿಯರ್‌ಗಳು ಅಕ್ರಮವಾಗಿ ಹಣ ವಸೂಲಿ ನಡೆಸುತ್ತಿದ್ದಾರ ಎಂದು ಆರೋಪಿಸಿದರು.

ಕೂಡಲೇ ಕೊಳಚೆ ಅಭಿವೃದ್ಧಿ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಫಲಾನುಭವಿಗಳೊಂದಿಗೆ ಕಚೇರಿಯ ಮುಂಭಾಗ ಟೆಂಟ್ ಹಾಕಿಕೊಂಡು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಧರಣಿಯಲ್ಲಿ ವೇದಿಕೆಯ ಮುಖಂಡರಾದ ರಾಮಣ್ಣ, ಸಾದಿಕ್, ಅಜರುದ್ದೀನ್, ಫೈರೋಜ್, ದಾದಾಪೀರ್, ಇಸ್ಮಾಯಿಲ್ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment