ಶಿವಮೊಗ್ಗದ ವಿವಿಧೆಡೆ ಕಾರ್ಪೊರೇಟರ್ಗಳ ನೇತೃತ್ವದ ನಿಯೋಗದಿಂದ ರಾಜಕಾಲುವೆ ಪರಿಶೀಲನೆ, ಆಕ್ರೋಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020

ಅಮೃತ್ ಯೋಜನೆ ಅಡಿಯಲ್ಲಿ ನಗರದ ರಾಜಾಕಾಲುವೆಗಳ ದುರಸ್ತಿ ಕಾರ್ಯ ಇದುವರೆಗೂ ಪೂರ್ಣಗೊಂಡಿಲ್ಲ ಎಂದು ಮಹಾ ನಗರ ಪಾಲಿಕೆ ವಿಪಕ್ಷ ನಾಯಕ ಹೆಚ್.ಸಿ.ಯೋಗೀಶ್ ಆರೋಪಿಸಿದರು.

ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ರಾಜಾಕಾಲುವೆಗಳ ದುರಸ್ತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ ಅವರು, ರಾಜಕಾಲು ವೆಗಳನ್ನು ರಿಪೇರಿಗೊಳಿಸುವ ಕಾರ್ಯ ಕಳೆದ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿವೆ ಎಂದು ದೂರಿದರು.

ಇತ್ತೀಚಿನ ದಿನಗಳಲ್ಲಿ ಅಲ್ಪ ಮಳೆಗೂ ಸಹ ರಾಜಾಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯದೆ ಮನೆಗಳಿಗೆ ನುಗ್ಗುತ್ತಿದ್ದು, ರಾಜಾ ಕಾಲುವೆಗಳ ದುರಸ್ತಿ ಕಾಮಗಾರಿ ಸರಿಯಾಗಿ ನಡೆಯದ ಕಾರಣ ಅವ್ಯವಸ್ಥೆಗೆ ಜನ ಒದ್ದಾಡುವ ಹಾಗೆ ಆಗಿದೆ ಎಂದರು.

ಯೋಗೀಶ್ ನೇತೃತ್ವದ ತಂಡದಲ್ಲಿ  ಆರ್.ಸಿ ನಾಯ್ಕ್, ಯಮುನಾ ರಂಗೇಗೌಡ, ರೇಖಾರಂಗನಾಥ್ ಸೇರಿದ ಪಾಲಿಕೆ ಸದಸ್ಯರನ್ನೊಳಗೊಂಡ ನಿಯೋಗ ಹೊಸಮನೆ 6 ನೇ ಅಡ್ಡರಸ್ತೆ, 1 ನೇ ಮುಖ್ಯರಸ್ತೆಯ ರಾಜಕಾಲುವೆ,  ಜೆಪಿಎನ್ ನಗರ, ಟಿಪ್ಪುನಗರ, ಶ್ರೀರಾಮ ನಗರ, ಶಾಂತಮ್ಮ ಲೇಔಟ್ ಹಾಗೂ ಮಹಾದೇವಿ ನಗರದ ರಾಜಕಾಲುವೆಗಳಿಗೆ ಭೇಟಿ ನಿಡಿ ಪರಿಶೀಲನೆ ನಡೆಸಿತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 11, 2020

Leave a Comment