ಸಾಗರ, ಹೊಸನಗರದಲ್ಲಿ RTO ಅಧಿಕಾರಿಗಳ ದಾಳಿ, ಲಾರಿಗೆ 5.27 ಲಕ್ಷ, ಜೆಸಿಬಿಗೆ 2 ಲಕ್ಷ ದಂಡ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

119060214 954258745054036 6933822829653446782 o.jpg? nc cat=105& nc sid=110474& nc ohc=XxkfaKGqL3MAX JHRqz& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ | SAGARA NEWS | 20 ಸೆಪ್ಟಂಬರ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ವಾಹನಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಭಾರಿ ದಂಡ ಹಾಕಿದ್ದಾರೆ. ಜೆಸಿಬಿಯೊಂದಕ್ಕೆ 2 ಲಕ್ಷ, ಲಾರಿಯೊಂದಕ್ಕೆ 5.27 ಲಕ್ಷದ ದಂಡ ವಿಧಿಸಲಾಗಿದೆ.

119613587 1219871485040936 5740018044776873668 n.jpg? nc cat=106& nc sid=8024bb& nc ohc=zqXTcmcl4ZgAX8PuhFi& nc ht=scontent.fixe1 1

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಶಿಕಲಾ ಅವರ ಮಾರ್ಗದರ್ಶನದಲ್ಲಿ ಸಾಗರ ಮತ್ತು ಹೊಸನಗರದಲ್ಲಿ ಸಾರಿಗೆ ಅಧಿಕಾರಿಗಳು ದಾಳಿ ನಡೆಸಿ, ವಾಹನಗಳನ್ನು ವಶಕ್ಕೆ ಪಡೆದು, ದಂಡ ವಿಧಿಸಲಾಗಿದೆ.

ರಿಪ್ಪನ್‍ಪೇಟೆಯಲ್ಲಿ ಜೆಸಿಬಿ ತಡೆದು ಪರಿಶೀಲಿಸಿದಾಗ ತೆರಿಗೆ ಪಾವತಿಸದಿರುವುದು ಕಂಡು ಬಂದಿದೆ. ಹಾಗಾಗಿ ಜೆಸಿಬಿಗೆ 2.05 ಲಕ್ಷ ರೂ. ದಂಡ ವಿಧಿಸಲಾಗಿದೆ. ಇನ್ನು ಲಾರಿಯೊಂದಕ್ಕೆ 70 ಸಾವಿರ ರೂ. ದಂಡ ಹಾಕಲಾಗಿದೆ. ಹೊಸನಗರದಲ್ಲಿ ಲಾರಿಯೊಂದಕ್ಕೆ 77 ಸಾವಿರ ರೂ. ದಂಡ ಹಾಕಲಾಗಿದೆ.

ಇದೇ ರೀತಿ ಸಾಗರದಲ್ಲಿ ದಾಳಿ ನಡೆಸಿ, ತೆರಿಗೆ ಪಾವತಿಸದ ಲಾರಿ ಮಾಲೀಕರಿಗೆ 5.27 ಲಕ್ಷ ರೂ. ದಂಡ ವಿಧಿಸಿ, ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ತೆರಿಗೆ ಪಾವತಿಸದೆ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ವಾಹನಗಳ ಪರಿಶೀಲನಾ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಆರ್‍ಟಿಒ ಅಧಿಕಾರಿಗಳು ತಿಳಿಸಿದ್ದಾರೆ. ಮೋಟರು ವಾಹನ ನಿರೀಕ್ಷಕ ವಾಸುದೇವ್, ಸಿಬ್ಬಂದಿಗಳಾದ ನಿಂಗಪ್ಪ, ಉಮೇಶ್ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment