ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 20 ಸೆಪ್ಟಂಬರ್ 2020
ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಪ್ರತಿಗೆ ಬೆಂಕಿ. ಬೆಂಗಳೂರಿಗೆ ಹೋಗುತ್ತೆ ಹೋರಾಟದ ನೆಲದ ಮಣ್ಣು. ಜಿಲ್ಲಾಡಳಿತದ ನಿರ್ಬಂಧವಿದ್ದರೂ ‘ಉಳುವವನೇ ಹೊಲದೊಡೆಯ’ ಘೋಷಣೆ ಅಡಿ ನಡೆಯಿತು ಪ್ರತಿಭಟನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾಗೋಡು ಚಳವಳಿಯ ನೆಲದಲ್ಲಿ
ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಸಾಗರ ತಾಲೂಕು ಕಾಗೋಡು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಕಾಗೋಡು ಆಕ್ರೋಶ, ಕಿಮ್ಮನೆ ಗರಂ
ಗೇಣಿ ರೈತರಿಗೆ ಕಾಂಗ್ರೆಸ್ ಪಕ್ಷ ಭೂಮಿ ಕೊಡಿಸಿತು. ಆ ಮೂಲಕ ಸಾಮಾಜಿಕ ಅಸಮತೋಲನ ತೊಡೆದು ಹಾಕುವ ಕೆಲಸ ಮಾಡಿತು. ಆದರೆ ಬಿಜೆಪಿ ಸರ್ಕಾರ ಬಂಡವಾಳಶಾಹಿ ಭೂಮಾಲೀಕರ ಕೈಗೆ ಭೂಮಿ ಕೊಡುವ ಕರಾಳ ಶಾಸನ ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ಧಮನಕಾರಿ ನೀತಿಯನ್ನು ಎಲ್ಲರು ಅರಿಯಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಬಂಡವಾಳಶಾಹಿಗಳು ಕೃಷಿ ಭೂಮಿ ಖರೀದಿ ಮಾಡುವಂತಿಲ್ಲ ಎಂಬ ಶಾಸನ ರೂಪಿಸಿತ್ತು. ಈಗ ಬಿಜೆಪಿ ಸರ್ಕಾರ ಯಾರೂ ಬೇಕಾದರು ಕೃಷಿ ಭೂಮಿ ಖರೀದಿಸುವ ಕಾಯ್ದೆ ತರಲು ಹೊರಟಿರುವುದು ಅತ್ಯಂತ ಮೂರ್ಖತನದ್ದಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಗರಂ ಆದರು.
https://www.facebook.com/liveshivamogga/videos/1001953453583764/?t=1
ಕಾಯ್ದೆಗೆ ಬೆಂಕಿ, ಬೆಂಗಳೂರಿಗೆ ಮಣ್ಣು
ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿದ ಕಾಂಗ್ರೆಸ್ ಮುಖಂಡರು, ಕಾಯ್ದೆಯ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಯಲಿದ್ದು, ಕಾಗೋಡು ಗ್ರಾಮದ ಮಣ್ಣನ್ನು ಸಂಗ್ರಹಿಸಿ, ಕೊಂಡೊಯ್ಯಲಾಯಿತು.
ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯರಾದ ಭೀಮನೇರಿ ಶಿವಪ್ಪ, ಕಲಗೊಡು ರತ್ನಾಕರ್, ಅನಿತಾಕುಮಾರಿ, ಶ್ವೇತಾ ಬಂಡಿ ಸೇರಿದಂತೆ ಹಲವರು ಈ ವೇಳೆ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]