ದುಡ್ಡಿದ್ದವನೆ ಹೊಲದೊಡೆಯ ಕಾನೂನು ತರಲು ಹೊರಟಿದ ಸರ್ಕಾರ, ರಾಜ್ಯ ಬಂದ್ ಮಾಡಿದರೆ ಸಂಪೂರ್ಣ ಬೆಂಬಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

119909669 961055577707686 682068807956211504 n.jpg? nc cat=103& nc sid=8024bb& nc ohc=Fu OV qGO6UAX Phl Y& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಸೆಪ್ಟಂಬರ್ 2020

ದುಡ್ಡಿದ್ದವರು ಹೊಲದೊಡೆಯನಾಗಲು ಪ್ರಚೋದಿಸುವ ರೈತ ವಿರೋಧಿ ಕಾಯ್ದೆಗಳ ಜಾರಿಗೆ ಮುನ್ನ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ಕರುನಾಡ ಯುವಶಕ್ತಿ ಸಂಘಟನೆ (ಕೆವೈಎಸ್) ಮನವಿ ಸಲ್ಲಿಸಿತು.

ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬೆಂಗಳೂರಿನಲ್ಲಿ ರೈತರು ಮತ್ತು ಇತರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಯಾವುದೇ ಸಂದರ್ಭದಲ್ಲಿ ಬಂದ್‌ನಂತಹ ನಿರ್ಧಾರ ಕೈಗೊಂಡರೂ ಕೂಡ ನಮ್ಮ ಸಂಘಟನೆ ಬೆಂಬಲಿಸುತ್ತದೆ ಎಂದು ಸಂಘಟನೆ ತಿಳಿಸಿತು.

119060214 954258745054036 6933822829653446782 o.jpg? nc cat=105& nc sid=110474& nc ohc=XxkfaKGqL3MAX JHRqz& nc ht=scontent.fixe1 1

ದೇವರಾಜು ಅರಸು ಅವರು ಉಳುವವನೆ ಹೊಲದೊಡೆಯ ಎಂಬ ಕಾನೂನು ಜಾರಿಗೆ ತಂದರೆ ಬಿಜಿಪಿ ಸರ್ಕಾರ ದುಡ್ಡಿದ್ದವನೇ ಹೊಲದೊಡೆಯ ಎಂಬ ಕಾನೂನು ತರಲು ಹೊರಟಿದೆ.ಇದು ರೈತರ ಸರ್ವನಾಶಕ್ಕೆ ಕಾರಣವಾಗುತ್ತದೆ ಮತ್ತು ಕೆಲವೇ ವರ್ಷಗಳಲ್ಲಿ ಭಾರತ ಆಹಾರ ಭದ್ರತೆಯನ್ನು ಕಳೆದುಕೊಳ್ಳುತ್ತದೆ. ಕಾರ್ಮಿಕರು ಬೀದಿಪಾಲಾಗುತ್ತಾರೆ. ಕೃಷಿ ಮಾರುಕಟ್ಟೆಗಳಲ್ಲಿ ಖಾಸಗಿ ದಲ್ಲಾಳಿಗಳೇ ಹೆಚ್ಚುತ್ತಾರೆ. ರೈತರಿಗೆ ನಿಖರವಾದ ಬೆಲೆ ಸಿಕ್ಕುವುದಿಲ್ಲ ಎಂದು ಆರೋಪಿಸಿದರು.

ಕೆವೈಎಸ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಸ್. ವಸಂತಕುಮಾರ್, ರಾಜ್ಯಾಧ್ಯಕ್ಷ ಶರವಣ ಎ.ಆರ್, ರಾಜ್ಯ ಕಾರ್ಯದರ್ಶಿ ಎ.ಎಸ್.ಚಿದಾನಂದ, ನಗರಾಧ್ಯಕ್ಷ ಎನ್.ರಮೇಶ್, ಶಿವಕುಮಾರ್ ಸೇರಿದಂತೆ ಹಲವರಿದ್ದರು.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 24, 2020

Leave a Comment