ಶಿವಮೊಗ್ಗ ಲೈವ್.ಕಾಂ | SORABA NEWS | 18 ಅಕ್ಟೋಬರ್ 2020
ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದ ದರೋಡೆಕೋರರ ತಂಡದ ಹೆಡೆಮುರಿ ಕಟ್ಟುವಲ್ಲಿ ಸೊರಬ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಾವೇರಿಯ ಅಕ್ಕಿ ಆಲೂರು ಪ್ರಶಾಂತ್ (20), ಜಡೆ ಮಂಗಾಪುರದ ಪ್ರಶಾಂತ್ (20), ಮೈಸೂರಿನ ಗಣೇಶ್ (22) ಬಂಧಿತರು. ಅಕ್ಟೋಬರ್ 14ರಂದು ಛತ್ರದಹಳ್ಳಿಯಲ್ಲಿ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದರೋಡೆ ಮಾಡಿದ್ದರು.
ಹಸು ಖರೀದಿ ನೆಪದಲ್ಲಿ ಮನೆಯೊಂದಕ್ಕೆ ತೆರಳಿದ ದರೋಡೆಕೋರರು, ಮಹಿಳೆ ಮನೆಯಿಂದ ಹೊರಗೆ ಬರುವಂತೆ ಮಾಡಿ, ಹಲ್ಲೆ ನಡೆಸಿದ್ದರು. ಆಕೆ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಸೊರಬ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.
ಸಂಪಗೋಡು ಗ್ರಾಮದ ಬಳಿ ಓಮ್ನಿ ಕಾರಿನಲ್ಲಿ ಕುಳಿತಿದ್ದವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಇವರ ವರ್ತನೆ ಅನುಮಾನಾಸ್ಪದವಾಗಿತ್ತು. ವಿಚಾರಣೆಗೆ ಒಳಪಡಿಸಿದಾಗ ದರೋಡೆ ಪ್ರಕರಣ ಬಯಲಾಗಿದೆ. ನಾಲ್ವರು ಪರಾರಿಯಯಾಗಿದ್ದು ಅವರ ಪತ್ತೆ ಕಾರ್ಯ ನಡೆಯುತ್ತಿದೆ.
ಸರ್ಕಲ್ ಇನ್ಸ್ಪೆಕ್ಟರ್ ಮರುಳಸಿದ್ಧಪ್ಪ, ಪಿಎಸ್ಐ ಟಿ.ಬಿ.ಪ್ರಶಾಂತ್ ಕುಮಾರತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ದರೋಡೆಕೋರರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]