ಶಿವಮೊಗ್ಗ ಲೈವ್.ಕಾಂ | SHIKARIPURA NEWS | 8 NOVEMBER 2020
ಕಚೇರಿ ವೇಳೆಯಲ್ಲಿ ಮೋಜು – ಮಸ್ತಿಯಲ್ಲಿ ತೊಡಗಿದ್ದ ಮೆಸ್ಕಾಂನ ಶಿಕಾರಿಪುರ ವಿಭಾಗದ ಕಿರಿಯ ಎಂಜಿನಿಯರ್ ಸೇರಿ ಆರು ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಈ ಸಂಬಂಧ ಮೆಸ್ಕಾಂ ಶಿವಮೊಗ್ಗ ಅಧೀಕ್ಷಕ ಎಂಜಿನಿಯರ್ ಮತ್ತು ಶಿಕಾರಿಪುರ ಕಾರ್ಯನಿರ್ವಾಹಕ ಎಂಜಿನಿಯರ್ ಆದೇಶ ಹೊರಡಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಂಜನಾಪುರ ಡ್ಯಾಂ ಬಳಿ ಪಾರ್ಟಿ
ನವೆಂಬರ್ 4ರಂದು ಕಿರಿಯ ಎಂಜಿನಿಯರ್ ಚಂದ್ರಶೇಖರ್ ರಾಥೋಡ್, ಸಹಾಯಕ ಉಗ್ರಾಣ ಪಾಲಕ ಎಸ್.ಎ.ರವಿ, ಪವರ್‍ಮನ್ ಪಿ.ಎಲ್.ವಿನಯ್ ಕುಮಾರ್, ಲೈನ್ ಮೆಕಾನಿಕ್‍ಗಳಾದ ಕೆ.ಎಸ್.ಮಂಜುನಾಥ್, ಎಲ್.ಸುರೇಶ್, ಟಿ.ಮಹೇಶ್ವರಪ್ಪ ಅವರು ಶಿಕಾರಿಪುರದ ಅಂಜನಾಪುರ ಡ್ಯಾಂ ಬಳಿ ಮೋಜು, ಮಸ್ತಿ ಮಾಡಿದ್ದರು. ಕಚೇರಿ ವೇಳೆಯಲ್ಲಿ ಇವರು ಪಾರ್ಟಿ ಮಾಡಿ, ಕುಣಿದು ಕುಪ್ಪಳಿಸಿದ್ದರು.
ವೈರಲ್ ಆಗಿತ್ತು ವಿಡಿಯೋ
ಮೆಸ್ಕಾಂ ಸಿಬ್ಬಂದಿಗಳು ಕಚೇರಿ ಅವಧಿಯಲ್ಲಿ ಪಾರ್ಟಿ ಮಾಡಿ ಕುಣಿದಿದ್ದ ವಿಡಿಯೋ, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗತ್ತು. ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಕಂಪನಿಯ ಗೌರವಕ್ಕೆ ಧಕ್ಕೆ ತಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಕಚೇರಿ ಅವಧಿಯಲ್ಲಿ ಮೋಜು – ಮಸ್ತಿಯಲ್ಲಿ ತೊಡಗಿದ್ದಕ್ಕೆ ಆರು ಮಂದಿಯನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]