ಶಿವಮೊಗ್ಗ ಲೈವ್.ಕಾಂ |SORABA NEWS | 29 NOVEMBER 2020
ಸೊರಬ ತಾಲೂಕಿನ ತವನಂದಿ – ಕೊರಕೋಡು ಗ್ರಾಮದ ಬಳಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ದೂರು ನೀಡಿದವನೆ ಈಗ ಅರೆಸ್ಟ್ ಆಗಿದ್ದಾನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದೂರು ಕೊಟ್ಟವನ ಬಂಧನವೇಕೆ?
ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ಹಣ ದರೋಡೆ ಪ್ರಕರಣ ಸಂಬಂಧ ಕಾರು ಚಾಲಕ ನಫೀಸ್ ಆಲಂ, ಕನ್ನಪ್ಪ ಮತ್ತು ವಿಶ್ವನಾಥ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಕಾರು ಚಾಲಕ ನಫೀಸ್ ಆಲಂ ಈ ಪ್ರಕರಣದಲ್ಲಿ ದೂರುದಾರನಾಗಿದ್ದ. ಆತನನ್ನೇ ಬಂಧಿಸಿದರುವುದು ಅಚ್ಚರಿ ಮೂಡಿಸಿದೆ. ಆದರೆ ತನಿಖೆ ವೇಳೆ ನಫೀಸ್ ಆಲಂ ದರೋಡೆಯ ಕಥೆಯ ಸೃಷ್ಟಿಕರ್ತ ಅನ್ನುವುದು ತಿಳಿದು ಬಂದಿದೆ.
ದೋರಡೆಯೇ ಆಗಿರಲಿಲ್ಲ
ಸಾಗರದ ಅಡಕೆ ವರ್ತಕರೊಬ್ಬರಿಗೆ ಸೇರಿದ 15 ಲಕ್ಷ ರೂ. ಹಣವನ್ನು ಕಾರಿನಲ್ಲಿ ತರಲಾಗುತ್ತಿತ್ತು. ಮಂಗಳವಾರ ರಾತ್ರಿ ಸೊರಬದ ತವನಂದಿ – ಕೊರಕೋಡು ಗ್ರಾಮದ ಬಳಿ ದರೋಡೆಕೋರರು ಅಡ್ಡಗಟ್ಟಿ, ಹಲ್ಲೆ ನಡೆಸಿ, ಕಾರು ಮತ್ತು ಹಣದ ಜೊತೆಗೆ ಎಸ್ಕೇಪ್ ಅಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದರಿಂದ ಆನವಟ್ಟಿಯಲ್ಲಿ ಭಾರಿ ಆತಂಕ ಮೂಡಿತ್ತು.
ವಿಚಾರಣೆ ವೇಳೆ ಬಣ್ಣ ಬಯಲು
ದರೋಡೆಯ ಮರುದಿನವೇ ಕಾರು ಮತ್ತು 7.5 ಲಕ್ಷ ರೂ. ಹಣ ಬನವಾಸಿ ಸಮೀಪ ಪತ್ತೆಯಾಗಿತ್ತು. ಮಹಾರಾಷ್ಟ್ರದಿಂದ ಬರುವಾಗ ಚಾಲಕ ನಫೀಸ್ ಜೊತೆಗಿದ್ದ ಅನ್ಸರ್ ಅಹಮದ್ ಎಂಬಾತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಅನ್ಸರ್ ಅಹಮದ್ ಹಲವು ಸಂಗತಿ ಬಾಯಿಬಿಟ್ಟಿದ್ದ. ಇದರ ಆಧಾರದ ಮೇಲೆ ತನಿಖೆ ನಡೆಸಿದಾಗ ನಫೀಸ್ ಆಲಂನ ಕಳ್ಳಾಟ ಗೊತ್ತಾಗಿದೆ. ಹಣ ಕಬಳಿಸುವ ಉದ್ದೇಶದಿಂದ ನಫೀಸ್ ಆಲಂ ದರೋಡೆಯ ನಾಟಕ ಆಡಿದ್ದ ಎಂದು ತಿಳಿದು ಬಂದಿದೆ.
ಮೂರು ತಂಡ ರಚಿಸಲಾಗಿತ್ತು
ದರೋಡೆ ಪ್ರಕರಣದ ತನಿಖೆಗೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಮೂರು ತಂಡ ರಚಿಸಿದ್ದರು. ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ಶಿಕಾರಿಪುರ ಹೆಚ್ಚುವರಿ ರಕ್ಷಣಾಧಿಕಾರಿ ಅದ್ದೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ಆರ್.ಡಿ.ಮರುಳಸಿದ್ದಪ್ಪ ನೇತೃತ್ವದಲ್ಲಿ ಸೊರಬ ಪಿಎಸ್ಐ ಟಿ.ಬಿ.ಪ್ರಶಾಂತ್ ಕುಮಾರ್, ಆನವಟ್ಟಿ ಪಿಎಸ್ಐ ಪ್ರವೀಣ್ ಕುಮಾರ್, ಶಿಕಾರಿಪುರ ಸಿಪಿಐ ಗುರುರಾಜ್ ಮೈಲಾರ್ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿಕಾರಿಪುರ ಠಾಣೆಯ ಪ್ರಶಾಂತ್, ಶಿವಕುಮಾರ್, ಆದರ್ಶ, ವಿನಯ್, ಸೊರಬ ಠಾಣೆಯ ಸಲ್ಮಾನ್ ಖಾನ್ ಹಾಜಿ, ದಿನೇಶ್, ಜಗದೀಶ್, ಆನವಟ್ಟಿ ಠಾಣೆಯ ಗಿರೀಶ್, ಟೀಕಪ್ಪ, ತಿರುಕಪ್ಪ, ಜಗದೀಶ್ ಉಪ್ಪಾರ್ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]