ಶಿವಮೊಗ್ಗ ಲೈವ್.ಕಾಂ |SHIMOGA NEWS | 11 DECEMBER 2020
ಇನ್ನೇನು ಕೆಲವೆ ಸಮಯದಲ್ಲಿ ಕರೋನ ಲಸಿಕೆ ಜನ ಬಳಕೆಗೆ ಬರಲಿದೆ. ಲಸಿಕೆ ಹಂಚಿಕೆಗೆ ಸರ್ಕಾರಗಳು ಸಿದ್ಧತೆ ಆರಂಭಿಸಿದೆ. ಲಸಿಕೆ ಪೂರೈಕೆ ಸುಗಮಗೊಳಿಸಲು ಕರ್ನಾಟಕ ಸರ್ಕಾರ ರಾಜ್ಯದ ಮೂರು ಜಿಲ್ಲೆಯಲ್ಲಿ ಲಸಿಕೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದಲ್ಲಿ ಲಸಿಕೆ ಸಂಗ್ರಹ ಕೇಂದ್ರ
ರಾಜ್ಯ ಸರ್ಕಾರ ಶಿವಮೊಗ್ಗ, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಲಸಿಕೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಅಕ್ಕಪಕ್ಕದ ಜಿಲ್ಲೆಗಳಿಗೆ ಇಲ್ಲಿಂದಲೇ ಲಸಿಕೆ ಪೂರೈಕೆ ಆಗಲಿದೆ. ಶಿವಮೊಗ್ಗ ಸಿಟಿಯ ನಾಲ್ಕು ಕಡೆ ಈಗಾಗಲೇ ಲಸಿಕೆ ಸಂಗ್ರಹಕ್ಕೆ ಸ್ಥಳ ಗುರುತಿಸಲಾಗಿದೆ.
ಲಸಿಕೆ ಸಂಗ್ರಹಕ್ಕೆ ಎಲ್ಲೆಲ್ಲಿ ಸ್ಥಳ ಗುರುತಿಸಲಾಗಿದೆ?
- ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಔಷಧ ಸಂಗ್ರಹ ಕೇಂದ್ರದ ವಾಕಿನ್ ಫ್ರೀಜರ್
- ಮೆಗ್ಗಾನ್ ಆಸ್ಪತ್ರೆ ಮುಖ್ಯ ಕಟ್ಟಡದಲ್ಲಿ ಮೆಡಿಕಲ್ ಕಾಲೇಜಿಗೆ ಸೇರಿದ ವಾಕಿನ್ ಫ್ರೀಜರ್
- ಪಶುವೈದ್ಯಕೀಯ ಕಾಲೇಜು ಆವರಣದಲ್ಲಿರುವ ವಾಕಿನ್ ಫ್ರೀಜರ್
- ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಆವರಣದಲ್ಲಿರುವ ವಾಕಿನ್ ಫ್ರೀಜರ್
ಲಸಿಕೆ ಸಂಗ್ರಹ ಹೇಗೆ?
ಕರೋನ ಲಸಿಕೆಯನ್ನು ತಣ್ಣೆಯ ವಾತಾವರಣದಲ್ಲಿ ಇರಿಸಬೇಕಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ಲಸಿಕೆ ಸಂಗ್ರಹಿಸಬೇಕಾಗಿರುವುದರಿಂದ ಸಾಮಾನ್ಯ ಫ್ರಿಜರ್‍ಗಳನ್ನು ಉಪಯೋಗಿಸುವುದಿಲ್ಲ. ಇದಕ್ಕಾಗಿ ವಾಕಿನ್ ಫ್ರೀಜರ್‍ಗಳೆ ಬೇಕು. ಔಷಧ ಉಗ್ರಾಣಗಳಲ್ಲಿ ಔಷಧ ಸಂಗ್ರಹಕ್ಕೆ ವಾಕಿನ್ ಫ್ರೀಜರ್ ಇರುತ್ತವೆ. ಇವು ದೊಡ್ಡ ಗಾತ್ರದ ಫ್ರೀಜರ್‍ಗಳು. ತಣ್ಣನೆ ವಾತಾವರಣದಲ್ಲಿ ಇರಿಸಬೇಕಾದ ಔಷಧಗಳನ್ನು ಇದರಲ್ಲಿಯೇ ಇರಿಸಲಾಗುತ್ತದೆ. ಕರೋನ ಲಸಿಕೆಯನ್ನು ಇದರಲ್ಲಿಯೇ ಇಟ್ಟು ಪೂರೈಕೆ ಮಾಡಲಾಗುತ್ತದೆ.
113 ಕಡೆ ಕೋಲ್ಡ್ ಚೈನ್ ಪಾಯಿಂಟ್
ಶಿವಮೊಗ್ಗ ಸಿಟಿಯಲ್ಲಿ ಲಸಿಕೆ ಸಂಗ್ರಹದ ಪ್ರಮುಖ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ತಾಲೂಕು ಮಟ್ಟದಲ್ಲಿ, ಸಮುದಾಯದ ಹಂತಕ್ಕೆ ಲಸಿಕೆ ತಲುಪಬೇಕಿದೆ. ಹಾಗಾಗಿ 113 ಕಡೆ ಕೋಲ್ಡ್ ಚೈನ್ ಪಾಯಿಂಟ್ ಸ್ಥಾಪಿಸಲಾಗಿದೆ. ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಈ ಕೋಲ್ಡ್ ಚೈನ್ ಪಾಯಿಂಟ್‍ನಲ್ಲಿವೆ. ಲಸಿಕೆಯನ್ನು ಇಲ್ಲಿ ಇರಿಸಲು ಯೋಜಿಸಲಾಗಿದೆ. ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದರಿಂದ, ಇಲ್ಲಿ ಸಣ್ಣ ಮಟ್ಟದ ಫ್ರೀಜರ್‍ಗಳು ಇರುತ್ತವೆ. ಈ ಫ್ರೀಜರ್‍ಗಳಲ್ಲಿ ಕರೋನ ಲಸಿಕೆಯನ್ನು ಇರಿಸಿ, ಅದನ್ನು ಹಳ್ಳಿ ಹಳ್ಳಿಯ ಹಂತಕ್ಕೂ ತಲುಪಿಸಲು ಯೋಜಿಸಲಾಗಿದೆ.
ವಾಕಿನ್ ಫ್ರೀಜರ್ ಹೇಗಿರುತ್ತೆ? ಲಸಿಕೆ ಸಂಗ್ರಹ ಹೇಗೆ? ಎಲ್ಲದರ ವಿಡಿಯೋ ರಿಪೋರ್ಟ್ ಇಲ್ಲಿದೆ.
ಅಂತಿಮ ಹಂತದ ಪ್ರಯೋಗದಲ್ಲಿ ಇರುವ ಕರೋನ ಲಸಿಕೆ ಕೆಲವೇ ಸಮಯದಲ್ಲಿ ಜನ ಬಳಕೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಗ್ರಹ ಕೇಂದ್ರಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದಲ್ಲಿ ಈಗಲಾಗೆ 20 ಸಾವಿರ ಮಂದಿಯನ್ನು ಗುರುತಿಸಲಾಗಿದ್ದು, ಮೊದಲು ಅವರಿಗೆ ಕರೋನ ಲಸಿಕೆ ನೀಡಲಾಗುತ್ತದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]