ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 13 DECEMBER 2020
ಚಲಿಸುತ್ತಿದ್ದ ಬಸ್‍ನಿಂದ ಜಿಗಿದು ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಸಿರಿವಂತೆ ಗ್ರಾಮದ ಬಳಿ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ | ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಬಳಿ ಸರ್ಕಲ್‌ನಲ್ಲಿ ಲಾರಿ, ಬೈಕ್ ಅಪಘಾತ
ಬಸ್‍ನಿಂದ ಜಿಗಿದದ್ದು ಏಕೆ?
ಕಾರ್ಗಲ್ ಶಿಲ್ಪಾ, ಹುಣಸೂರಿನ ಮಧುರಾ ಮತ್ತು ಯುವಕನೊಬ್ಬ ಬಸ್ಸಿನಿಂದ ಜಿಗಿದವರು. ಸಾಗರದಿಂದ ಕಾರ್ಗಲ್‍ಗೆ ತೆರಳುತ್ತಿದ್ದ ಬಸ್ಸು ಸಿರವಂತೆ ಬಳಿ ಬರುತ್ತಿದ್ದಂತೆ ದಟ್ಟ ಹೊಗೆ ಆವರಿಸಿಕೊಂಡಿದೆ. ಇದರಿಂದ ಆತಂಕಕ್ಕೀಡಾದ ಪ್ರಯಾಣಿಕರ ಪೈಕಿ ಈ ಮೂವರು ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಜಿಗಿದಿದ್ದಾರೆ ಎಂದು ಹೇಳಲಾಗುತ್ತಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ಸಿಗೆ ಬೆಂಕಿ ಹೊತ್ತಿರಲಿಲ್ಲ
ಬೆಂಕಿ ನಂದಿಸಲು ಬಸ್ಸಿನಲ್ಲಿ ಇರಿಸಿದ್ದ ಬೆಂಕಿ ನಿರೋಧಕ ಸಿಲಿಂಡರ್ ಕೆಳಗೆ ಬಿದ್ದು, ಅದರೊಳಗಿದ್ದ ಕೆಮಿಕಲ್, ಹೊಗೆ ರೀತಿಯಲ್ಲಿ ಆವರಿಸಿಕೊಂಡಿತ್ತು. ಇದನ್ನು ಕಂಡು ಗಾಬರಿಯಾದ ಈ ಮೂವರು, ಬೆಂಕಿ ಅಂದುಕೊಂಡು ಬಸ್ಸಿನಿಂದ ಕೆಳಗೆ ಜಿಗಿದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | ಶಿವಮೊಗ್ಗದ ಬೇಡರಹೊಸಹಳ್ಳಿ ಬಳಿ ಭೀಕರ ಅಪಘಾತ, ಕಾರು, ಟಾಟಾ ಏಸ್ ಮುಖಾಮುಖಿ ಡಿಕ್ಕಿ
ಸ್ಥಳೀಯರಿಂದ ರಕ್ಷಣೆ
ಬಸ್ಸಿನಿಂದ ಜಿಗಿದ ಮೂವರು ರಸ್ತೆ ಬದಿಯಲ್ಲಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅದೇ ದಾರಿಯಲ್ಲಿ ಬರುತ್ತಿದ್ದ ಹೊಟೇಲ್ ಒಂದರ ಮಾಲೀಕ ಜಾವೇದ್, ತಮ್ಮ ಟಾಟಾ ಏಸ್ ವಾಹನದಲ್ಲಿ ಮೂವರನ್ನು ಕರೆತಂದು ಸಾಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಗಾಯಗೊಂಡವರ ಪೈಕಿ ಇಬ್ಬರು ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ | ಶಿವಮೊಗ್ಗ ಲೈವ್ | ಡಿಸೆಂಬರ್ 13ರ ನ್ಯೂಸ್ ಅಪ್ ಡೇಟ್ | ಕ್ಲಿಕ್ ಮಾಡಿ, ನ್ಯೂಸ್ ಓದಿ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]