BREAKING NEWS | ಹಳಿಯಿಂದ ಕೆಳಗಿಳಿದ ಇಂಟರ್‌ಸಿಟಿ ರೈಲು, ತಪ್ಪಿತು ಭಾರಿ ಅನಾಹುತ, ಎಲ್ಲಾಗಿದ್ದು ಘಟನೆ? ಹೇಗಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 DECEMBER 2020

ಬೆಂಗಳೂರು – ಶಿವಮೊಗ್ಗ – ತಾಳಗುಪ್ಪ ಇಂಟರ್‌ಸಿಟಿ ರೈಲು ಹಳಿ ತಪ್ಪಿದೆ. ಹೊಸನಗರ ತಾಲೂಕು ಸೂಡೂರು ಬಳಿ ಘಟನೆ ಸಂಭವಿಸಿದೆ. ಲೋಕೊ ಪೈಲೆಟ್‍ (ಚಾಲಕ) ಸಮಯಪ್ರಜ್ಞೆಯಿಂದಾಗಿ ದೊಡ್ಡ ಅಪಾಯ ತಪ್ಪಿದೆ.

ಹಳಿ ತಪ್ಪಿದ್ದು ಹೇಗೆ?

ಶಿವಮೊಗ್ಗದಿಂದ ಸಾಗರದ ತಾಳಗುಪ್ಪ ಕಡೆಗೆ ಇಂಟರ್‌ಸಿಟಿ ರೈಲು ಸಂಚರಿಸುತ್ತಿತ್ತು. ಹೊಸನಗರದ ಸೂಡೂರು ಸಮೀಪ  ರೈಲ್ವೆಯ 99ನೇ ಕಿ.ಮೀ.ನಲ್ಲಿ ರೈಲಿನ ಎಂಜಿನ್‍ ಚಕ್ರಗಳು, ಹಳಿಯಿಂದ ಕೆಳಗಿಳಿದಿವೆ. ಡ್ರಿಲ್ ಮೆಲ್ಟ್ ಆಗಿ ತುಂಡಾಗಿರುವುದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ನಿಧಾನವಾಗಿ ಚಲಿಸುತ್ತು ರೈಲು

ಸೂಡೂರು ರೈಲ್ವೆ ಗೇಟ್ ಮತ್ತು ಅರಸಾಳು ರೈಲ್ವೆ ನಿಲ್ದಾಣದ ನಡುವೆ ತಿರುವು ಇದೆ. ಹಾಗಾಗಿ ಇಲ್ಲಿ ಕೇವಲ 40 ರಿಂದ 50 ಕಿ.ಮೀ ವೇಗದಲ್ಲಿ ರೈಲು ಸಂಚರಿಸಬೇಕು. ಇದೇ ವೇಗದಲ್ಲಿದ್ದ ಇಂಟರ್‌ಸಿಟಿ ರೈಲು ಎಂಜಿನ್‍ ಹಳಿ ತಪ್ಪಿದೆ. ಲೋಕೋ ಪೈಲೆಟ್ (ರೈಲು ಚಾಲಕ) ಸಮಯ ಪ್ರಜ್ಞೆ ಮರೆದಿದ್ದರಿಂದ ದೊಡ್ಡ ಅಪಾಯ ತಪ್ಪಿದೆ.

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

ರೈಲಿನಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಂಬಂಧಿಕರು, ಸ್ಥಳೀಯರ ನೆರವಿನೊಂದಿಗೆ ಪ್ರಯಾಣಿಕರು ಸಾಗರ, ತಾಳಗುಪ್ಪದ ಕಡೆಗೆ ತೆರಳುತ್ತಿದ್ದಾರೆ.

ರೈಲಿನ ಕಥೆ ಮುಂದೇನು?

ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಳಿಯಿಂದ ಕೆಳಗಿಳಿದಿರುವ ಇಂಟರ್‍ಸಿಟಿ ರೈಲನ್ನು ಕುಂಸಿ ನಿಲ್ದಾಣಕ್ಕೆ ತರಲು ಯೋಜಿಸಲಾಗುತ್ತಿದೆ. ಮತ್ತೊಂದು ಎಂಜಿನ್‍ ಬಳಸಿ ರೈಲನ್ನು ತರಲು ಚಿಂತಿಸಲಾಗುತ್ತಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 31, 2020

ಊರಗಡೂರಿನ ಸಂಕೇತ್‌ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

ಊರಗಡೂರಿನ ಸಂಕೇತ್‌ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

Leave a Comment