BREAKING NEWS | ಜಿಲ್ಲೆಯಾದ್ಯಂತ ಸ್ಫೋಟದ ಶಬ್ದ, ಭೂಕಂಪದ ಅನುಭವ, ಮನೆಯಿಂದ ಹೊರ ಬಂದ ಜನ

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 JANUARY 2021

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗಿದೆ. ಗಾಬರಿಯಾದ ಜನರು ಮನೆಯಿಂದ ಹೊರ ಬಂದು ನಿಂತಿದ್ದಾರೆ.

ಎರಡು ಭಾರಿ ಶಬ್ದ

ಜಿಲ್ಲೆಯಾದ್ಯಂತ ಎರಡು ಭಾರಿ ಶಬ್ದ ಕೇಳಿಸಿದೆ. ಮೊದಲ ಬಾರಿಗೆ ಕಡಿಮೆ ಶಬ್ದ ಇತ್ತು. ಎರಡನೆ ಭಾರಿ ಜೋರು ಶಬ್ದ ಕೇಳಿಸಿದೆ. ರಾತ್ರಿ 10.21ರ ಹೊತ್ತಿಗೆ  ಮೊದಲು ಶಬ್ದ ಕೇಳಿಸಿದೆ. 10.23ರ ವೇಳೆಗೆ ಎರಡನೆ ಸರ್ತಿ ಭಾರಿ ಶಬ್ದ ಕೇಳಿಸಿದೆ.

ಭೂಕಂಪದ ಅನುಭವ

ಸ್ಫೋಟದ ಶಬ್ದದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆ ಬಾಗಿಲು, ಕಿಟಕಿಗಳು ತೆರೆದುಕೊಂಡಿವೆ. ಕೆಲವು ಕಡೆ ಗಾಜು ಪುಡಿಪುಡಿಯಾಗಿರುವ ವರದಿಯಾಗಿದೆ. ಮನೆಯಲ್ಲಿನ ವಸ್ತುಗಳು ಕೆಳಗೆ ಬಿದ್ದಿದೆ ಎಂದು ತಿಳಿದು ಬಂದಿದೆ.  ಇದರಿಂದ ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಬಂದು ನಿಂತಿದ್ದಾರೆ.

Kalleshwara-Enterprises.webp

ಎಲ್ಲೆಲ್ಲಿ ಶಬ್ದ ಕೇಳಿದೆ?

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಶಬ್ದ ಕೇಳಿದೆ. ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಸಾಗರ ಸೇರಿದಂತೆ ವಿವಿಧೆಡೆ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗಿದೆ. ಈ ಕುರಿತು ಜಿಲ್ಲಾಡಳಿತ, ಅಧಿಕಾರಿಗಳು ಯಾವುದನ್ನು ಖಚಿತ ಪಡಿಸಿಲ್ಲ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment