ಶಿವಮೊಗ್ಗ ಲೈವ್.ಕಾಂ | SHIMOGA NEWS | 11 FEBRUARY 2021
ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯಬೇಕು, ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ, ಬೆಲೆ ಏರಿಕೆ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಇವತ್ತು ಪ್ರತಿಭಟನೆ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಪ್ಪನಾಯಕ ಪ್ರತಿಮೆ ಬಳಿಯಿಂದ ನೆಹರೂ ರಸ್ತೆಯಿಂದ ಗೋಪಿ ಸರ್ಕಲ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಗೋಪಿ ಸರ್ಕಲ್‍ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
‘ಯಾವ ಊರಲ್ಲಿ ಇದೆ ಸಬ್ ಕಾ ಸಾಥ್?’
ಪ್ರಧಾನಿ ನರೇಂದ್ರ ಮೋದಿ ಸಬ್ ಕಾ ಸಾಥ್ ಅನ್ನುತ್ತಾರೆ. ಆದರೆ ಮುಂಬೈ, ದೆಹಲಿ, ಕಲ್ಕತ್ತಾದ ಉದ್ಯಮಿಗಳಿಗೆ ಸಾಥ್ ನೀಡುತ್ತಿದ್ದಾರೆ. ಮೋದಿ ಅವರು ಹೇಳುವ ಸಬ್ ಕಾ ಸಾಥ್ ಯಾವ ಊರಿನಲ್ಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು.
ಬಗರ್ ಹುಕುಂ ಸಮಿತಿ ಸಭೆ ಮಾಡಬೇಕು, ಹಕ್ಕುಪತ್ರ ನೀಡಬೇಕು, ಖಾತೆ ಮಾಡಿಸಬೇಕು. ಆದರೆ ಇದೆ ಊರಿನಿಂದ ಸಿಎಂ ಆಗಿರುವ ಯಡಿಯೂರಪ್ಪ ಅವರು ಒಬ್ಬರಿಗಾದರೂ ಸಾಗುವಳಿ ಪತ್ರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
26 ಕಾಳಧನಿಕರು ಮೋದಿ ಊರಿನವರು
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಅಧಿಕಾರಕ್ಕೆ ಬಂದ 90 ದಿನದಲ್ಲಿ ಕಳ್ಳ ಹಣ ತರುತ್ತೇವೆ ಅಂದರು. ಆದರೆ ಕಳ್ಳ ಹಣ ಮಾಡಿದ್ದ 27 ಮಂದಿ ದೇಶ ಬಿಟ್ಟರು. ಇದರಲ್ಲಿ 26 ಮಂದಿ ಮೋದಿಯ ಊರು ಗುಜರಾತಿನವರು. ಒಬ್ಬರು ಕರ್ನಾಟಕದವರು. ಇನ್ನು, ದೇಶದಲ್ಲಿ 25 ರಿಂದ 30 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದ್ದಾವೆ. ಆದರೆ ಮೋದಿ ಕಣ್ಣಿಗೆ ಬರಿ ಬೃಹತ್ ಕೈಗಾರಿಕೆಗಳಷ್ಟೆ ಕಾಣಿಸುತ್ತಿವೆ. ದೇಶದ ಜನರು ಬಡವಾಗುತ್ತಿದ್ದಾರೆ. ಆದರೆ ಅಮಿತ್ ಷಾ ಮಗ ಮಾತ್ರ ಶೇ.700ರಷ್ಟು ಶ್ರೀಮಂತನಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೀರ್ಥಹಳ್ಳಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣವೊಂದನ್ನು ಅತ್ಯಾಚಾರ ಮತ್ತು ಕೊಲೆ ಎಂದು ಬಿಂಬಿಸಿದರು. ಆದರೆ ಶೃಂಗೇರಿಯಲ್ಲಿ ಬಜರಂಗದಳ ಕಾರ್ಯಕರ್ತರಿಂದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಬಿಜೆಪಿಯಲ್ಲಿರುವ ಮಹಿಳೆಯರೇಕೆ ಮಾತಾಡುತ್ತಿಲ್ಲ. ಐದು ರೂ. ಹೆಚ್ಚಳ ಆಗಿದ್ದಕ್ಕೆ ಸಿಲಿಂಡರ್ ತಲೆ ಮೇಲೆ ಹೊತ್ತು ಓಡಾಡಿದ್ದ ಶೋಭಾ ಕರಂದ್ಲಾಜೆ ಅವರು ಈಗ ಎಲ್ಲಿ ಹೋದರು ಎಂದು ಪ್ರಶ್ನಿಸಿದರು.
ಕಣ್ಣೀರಿನ ನಾಟಕ ಶೋಭೆ ತರುವುದಿಲ್ಲ
ಕೇಂದ್ರ ಮತ್ತು ರಾಜ್ಯ ಸರ್ಕಾರ ದೊಡ್ಡ ಉದ್ಯಮಿಗಳ ದಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಕಣ್ಣೀರು ಹಾಕಿದ್ದಾರೆ. ಇಂತಹ ನಾಟಕಗಳು ಪ್ರಧಾನಿ ಆದವರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]