ಜಾತಿ ಸಮೀಕ್ಷೆ, ಹಿಂದೂ ಧರ್ಮಿಯರಿಗೆ ಶಾಸಕ ಚನ್ನಬಸಪ್ಪ ಸಲಹೆ, ಏನದು? ಇಲ್ಲಿದೆ ಸುದ್ದಿಗೋಷ್ಠಿಯ ಹೈಲೈಟ್ಸ್‌

SN-Channabasappa-Press-meet-in-Shimoga

ಶಿವಮೊಗ್ಗ: ಜಾತಿ ಸಮೀಕ್ಷೆಯಲ್ಲಿ (Caste Survey) ಹಿಂದೂ ಧರ್ಮಿಯರು ಪ್ರತ್ಯಕ್ಷವಾಗಿ ಪಾಲ್ಗೊಳ್ಳಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ. ಜಾತಿ ಕಾಲಂನಲ್ಲಿ ಆಯಾಯ ಜಾತಿಯ, ಉಪ ಜಾತಿ ಕಾಲಂನಲ್ಲಿ ಉಪ ಜಾತಿಯ ಹೆಸರನ್ನು ಬರೆಯಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು. ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ವೀರಶೈವ, ಲಿಂಗಾಯತ ಸೇರಿ ಎಲ್ಲ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಯಿಸಬೇಕು. ಇದರಲ್ಲಿ ನಿಜವಾದ ಭಾರತೀಯತೆ ಇದೆ. ಇದು ನಂಬಿಕೆಯ ಪ್ರಶ್ನೆಯಾಗಿದೆ ಎಂದರು. ಎಂಎಲ್‌ಎ ಸುದ್ದಿಗೋಷ್ಠಿಯ … Read more

ಹೊಟ್ಟೆನೋವು ಅಂತಾ ಆಸ್ಪತ್ರೆಗೆ ಬಂದ ಮಹಿಳೆ, ಪರಿಶೀಲಿಸಿದಾಗ ಕಾದಿತ್ತು ಆಘಾತ

Gadde-in-Lady-stomach-in-Sagara-Hospital.

ಶಿವಮೊಗ್ಗ: ಮಹಿಳೆಯ ಗರ್ಭಕೋಶದ ಸುತ್ತ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ಹೊರ ತೆಗೆಯುವಲ್ಲಿ ಸಾಗರದ ತಾಯಿ-ಮಗು ಸರಕಾರಿ ಆಸ್ಪತ್ರೆಯ (Hospital) ವೈದ್ಯರ ತಂಡ ಯಶಸ್ವಿಯಾಗಿದೆ. 47 ವರ್ಷದ ಮಹಿಳೆಯ ಗರ್ಭಕೋಶದ ಸುತ್ತ 6.5 ಕೆ.ಜಿ ಗಡ್ಡೆ ಬೆಳೆದಿತ್ತು. ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರು, ತಾಯಿ-ಮಗು ಸರಕಾರಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿದಾಗ ಹೊಟ್ಟೆ ಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪ್ರಸೂತಿ ತಜ್ಞೆ ಡಾ. ವಿದ್ಯಾಶ್ರೀ ನೇತೃತ್ವದ ವೈದ್ಯರ ತಂಡ ಸತತ 3 … Read more

‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ದೇಶ ವಿರೋಧಿಗಳಿಗೆ ಶಕ್ತಿ’

BY-Raghavendra-Press-meet-in-Shimoga-city

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ (Government) ಅಧಿಕಾರಕ್ಕೆ ಬಂದಾಗಲೆಲ್ಲ ದೇಶ ವಿರೋಧಿಗಳಿಗೆ ಶಕ್ತಿ ಬರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು. ಪತ್ರಿಕಾ ಭವನದ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದೇಶ ವಿರೋಧಿ ಚಿಂತನೆ ಮತ್ತು ಶಕ್ತಿಗಳು ಹೆಚ್ಚುತ್ತವೆ. ಇದಕ್ಕೆ ಭದ್ರಾವತಿ, ಶೃಂಗೇರಿ, ಸಾಗರ, ಮದ್ದೂರಿನಲ್ಲಿ ನಡೆದಿರುವ ಘಟನೆಗಳೆ ಸಾಕ್ಷಿ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸುಮ್ಮನಾಗಿರುವುದು ಖಂಡನೀಯ ಎಂದರು. ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ … Read more

‘ಪೊಲೀಸರು ಕರ್ಮ ಅನುಭವಿಸುತ್ತಾರೆ, ಸರ್ಕಾರಕ್ಕೆ ಶಾಪ ತಟ್ಟುತ್ತೆʼ

KS-Eshwarappa-with-e-vishwas.

SHIVAMOGGA LIVE NEWS, 16 JANUARY 2025 ಶಿವಮೊಗ್ಗ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದನಗಳ (Cow) ಕೆಚ್ಚಲು ಕತ್ತರಿಸಿದ ಪ್ರಕರಣದ ವಿರುದ್ಧ ಮಾಜಿ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ, ಪೊಲೀಸ್‌ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈ‍ಶ್ವರಪ್ಪ, ಸರ್ಕಾರ ಮತ್ತು ಪೊಲೀಸ್‌ ಇಲಾಖೆ ವಿರುದ್ಧ ಸಿಡಿಮಿಡಿಗೊಂಡರು. ಈಶ್ವರಪ್ಪ ಏನೆಲ್ಲ ಹೇಳಿದರು? ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ಬಸ್‌ ಹತ್ತಿ ಆಧಾರ್‌ ಕಾರ್ಡ್‌ ತೆಗೆಯಲು ಮುಂದಾದ ಮಹಿಳೆಗೆ ಕಾದಿತ್ತು ಆಘಾತ, … Read more

ಟ್ರೆಕ್ಕಿಂಗ್‌ ತೆರಳುವವರಿಗೆ ಇನ್ಮುಂದೆ ಟಿಕೆಟ್‌ ಕಡ್ಡಾಯ, ವೆಬ್‌ಸೈಟ್‌ ಆರಂಭ

Kannada-News-Update

STATE NEWS, 4 OCTOBER 2024 : ಚಾರಣಕ್ಕೆ (Trekking) ಹೋಗುವವರಿಗೆ ಅರಣ್ಯ ಇಲಾಖೆ ಆನ್‌ಲೈನ್‌ನಲ್ಲೇ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ವೆಬ್‌ಸೈಟ್ ರೂಪಿಸಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ವೆಬ್‌ಸೈಟ್‌ ಉದ್ಘಾಟಿಸಿದರು. ಕನಿಷ್ಠ 300 ಚಾರಣಿಗರಿಗೆ ಅವಕಾಶ ಇದನ್ನೂ ಓದಿ » ಶಿವಮೊಗ್ಗ ದಸರಾ ವೇದಿಕೆಯಲ್ಲಿ ನಟಿ ಉಮಾಶ್ರೀ ಗರಂ, ಕಾರಣವೇನು?

ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಜನಪ್ರತಿನಿಧಿಗಳಿಗೆ ಸನ್ಮಾನ

190624 CS Shadakshari press meet in shimoga

SHIVAMOGGA LIVE NEWS | 20 JUNE 2024 SHIMOGA : ನೂತನವಾಗಿ ಆಯ್ಕೆಯಾಗಿರುವ ಜಿಲ್ಲೆಯ ಸಂಸದ, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಸರ್ಕಾರಿ ನೌಕರರ (Government Employees) ಸಂಘದ ಜಿಲ್ಲಾ ಶಾಖೆಯಿಂದ ಜೂ.23ರಂದು ಅಭಿನಂದನಾ ಕಾರ್ಯಕ್ರಮ, ನವೀಕೃತ ಸರ್ಕಾರಿ ನೌಕರರ ಕಟ್ಟಡದ ಉದ್ಘಾಟನೆ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. … Read more

7ನೇ ವೇತನ ಆಯೋಗ, ವರದಿ ಜಾರಿ ಯಾವಾಗ?, ಷಡಾಕ್ಷರಿ ಹೇಳಿದ್ದೇನು?

190624 CS Shadakshari press meet in shimoga

SHIVAMOGGA LIVE NEWS | 19 JUNE 2024 SHIMOGA : 7ನೇ ವೇತನ ಆಯೋಗದ (Pay Commission) ವರದಿಯನ್ನು ಕೂಡಲೆ ಜಾರಿಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ. ಮುಂದಿನ ಸಂಪುಟ ಸಭೆಯಲ್ಲಿ ವರದಿ ಜಾರಿ ಆಗುವ ನಿರೀಕ್ಷೆ ಇದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ನೇ ವೇತನ ಆಯೋಗದ ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ಜೂನ್ … Read more

ಶಿವಮೊಗ್ಗದಲ್ಲಿ 2 ದಿನ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ, ಹೊಸದಾಗಿ 2 ಸ್ಪರ್ಧೆ ಸೇರ್ಪಡೆ

CS-Shadakshari-Government-Employees-Association

SHIVAMOGGA LIVE NEWS | 3 MARCH 2024 SHIMOGA : ಮಾ.4 ಮತ್ತು 5ರಂದು ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ನಡೆಯಲಿದೆ. ಸರ್ಕಾರಿ ನೌಕರರ ಭವನ ಹಾಗೂ ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಲಾಗಿದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಷಡಾಕ್ಷರಿ, 3,500ಕ್ಕೂ ಹೆಚ್ಚು ನೌಕರರು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ ಕೊಕ್ಕೊ ಮತ್ತು ಯೋಗ ಸ್ಪರ್ಧೆ ಸೇರಿಸಲಾಗಿದೆ. ವಿವಿಧ … Read more

ಸರ್ಕಾರಿ ನೌಕರರ ಸಮ್ಮೇಳನಕ್ಕೆ ಶಿವಮೊಗ್ಗದಿಂದ 100 ಬಸ್, 3 ಬೇಡಿಕೆ ಸಲ್ಲಿಸಲು ಪ್ಲಾನ್, ಏನೇನು ಬೇಡಿಕೆ?

C-S-Shadakshari-Press-meet-in-Shimoga

SHIVAMOGGA LIVE NEW S | 19 FEBRUARY 2024 SHIMOGA : ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.27ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾ ಸಮ್ಮೇಳನ ಆಯೋಜಿಸಲಾಗಿದೆ. ಆಂದು ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಆಶಾಭಾವನೆ ಇದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ತಿಳಿಸಿದರು. ಸಿಎಂ, ಡಿಸಿಂ, ಮಿನಿಸ್ಟರ್‌ಗಳು ಭಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶಯ ನುಡಿ ನುಡಿಯಲಿದ್ದಾರೆ. ಸಚಿವರಾದ ಡಾ. ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, … Read more

11 ಸಾವಿರ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ, ಯಾರೆಲ್ಲ ಇದರ ವ್ಯಾಪ್ತಿಗೆ ಬರುತ್ತಾರೆ?

C-S-Shadakshari-Press-meet-in-Shimoga

SHIVAMOGGA LIVE NEWS | 12 JANUARY 2024 SHIMOGA : 2006ರ ಏಪ್ರಿಲ್‌ 1ಕ್ಕಿಂತ ಪೂರ್ವದಲ್ಲಿ ನೇಮಕಾತಿ ಹೊಂದಿರುವ ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ತರಲು ಶೀಘ್ರ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದರಿಂದ ರಾಜ್ಯದ 11,366 ಬಾಧಿತ ಒಪಿಎಸ್‌ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ. ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಭೇಟಿಯಾಗಿ … Read more